ದಾವಣಗೆರೆ: ನಗರದ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಟೈರ್ ಗೆ ಬೆಂಕಿ ಹಚ್ಚಲು ಹೋಗಿ ವ್ಯಕ್ತಿಯೊಬ್ಬ ಕೈ ಸುಟ್ಟುಕೊಂಡ ಘಟನೆ ದಾವಣಗೆರೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದಿದೆ.
ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ಭಗ್ನ ಗೊಳಿಸಿರುವ ಘಟನೆ ಖಂಡಿಸಿ ಇಂದು ದಾವಣಗೆರೆಯ ರಾಯಣ್ಣ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬ ಟೈರ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಹೋಗಿದ್ದಾನೆ. ಆಗ ಪೆಟ್ರೊಲ್ ಸುರಿದಿದ್ದರಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಆತ ಹಿಡಿದುಕೊಂಡಿದ್ದ ಪೆಟ್ರೋಲ್ ಬಾಟಲಿಗೆ ಬೆಂಕಿಹೊತ್ತಿಕೊಂಡಿದ್ದಲ್ಲದೇ, ಆತನ ಕೈಗೆಯೇ ಬೆಂಕಿಯ ಕಿಡಿ ಹೊತ್ತಿಕೊಂಡಿದೆ.
ಕೂಡಲೇ ಎಚ್ಚೆತ್ತ ವ್ಯಕ್ತಿ ಬಾಟಲ್ ಅನ್ನ ಬಿಸಾಕಿದ್ದು ಕೈಗೆ ಗಾಯ ಮಾಡಿಕೊಂಡಿದ್ದಾನೆ. ಇನ್ನು, ಬೆಂಕಿ ಹತ್ತಿದ್ದರೂ ಪೆಟ್ರೋಲ್ ಸುರಿದಿದ್ದರಿಂದ ಏಕಾಏಕಿ ಬೆಂಕಿ ಹೊತ್ತಿ ಆತನ ಕೈಗೆ ಗಾಯವಾಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
PublicNext
19/12/2021 03:22 pm