ವಿಜಯಪುರ: ನನಗೆ ಗೃಹ ಸಚಿವ ಸ್ಥಾನ ಕೊಟ್ಟು ನೋಡಿ ಯಾರೂ ಕಮಕ್ ಕಿಮಕ್ ಎನ್ನದಂತೆ ಮಾಡ್ತೀನಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಈ ಮೂಲಕ ಅವರು ಪರೋಕ್ಷವಾಗಿ ಗೃಹ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ.
ವಿಜಯಪುರ ನಗರದ ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮದ ವೇದಿಕೆ ಮೇಲೆ ಮಾತನಾಡಿದ ಯತ್ನಾಳ್, ಈಗೀಗ ಗೃಹ ಸಚಿವರು ಬಹಳ ಸಂಭಾವಿತರಾಗಿದ್ದಾರೆ. ನನಗೆ ಗೃಹ ಸಚಿವ ಸ್ಥಾನ ಕೊಟ್ಟು ನೋಡಿ ಎಲ್ಲರಿಗೂ ಹೇಗೆ ಉತ್ತರ ಕೊಡ್ತೀನಿ ಎಂಬುದು ತಿಳಿಯಲಿದೆ. ಈಗಿನ ಗೃಹ ಸಚಿವರಿಗೆ ಫಾರೆಸ್ಟ್ ಅಥವಾ ರೆವಿನ್ಯೂ ಖಾತೆ ಕೊಡಿ. ನನಗೆ ಗೃಹ ಖಾತೆ ಕೊಟ್ಟು ನೋಡಿ ಮಂಗಳೂರಿನಲ್ಲಿ ಗಲಾಟೆ ಮಾಡಿದವರಿಗೆ ಪಾಠ ಕಲಿಸ್ತೇನೆ ಎಂದ ಯತ್ನಾಳ್ ಪೊಲೀಸರ ಮೇಲೆ ದಾಳಿ ಮಾಡಿದರೆ ಸುಮ್ಮನಿರಬೇಕಾ ಎಂದು ಪ್ರಶ್ನಿಸಿದ್ದಾರೆ.
PublicNext
18/12/2021 05:58 pm