ಹುಬ್ಬಳ್ಳಿ: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟವನ್ನು ನಾನು ಖಂಡಿಸುತ್ತೇನೆ. ಈಗಾಗಲೇ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಸರ್ಕಾರಿ ಆಸ್ತಿಪಾಸ್ತಿ ಹಾನಿ ಮಾಡಿದ, ಪೊಲೀಸ್ ವಾಹನ ಜಖಂ ಮಾಡಿದವರನ್ನು ಬಂಧಿಸಲಾಗಿದೆ. ರಾಷ್ಟ್ರ ಭಕ್ತರ ಪ್ರತಿಮೆಗಳಿಗೆ ಅಪಮಾನ ಪ್ರವೃತ್ತಿ ಸಹಿಸುವುದಿಲ್ಲ. ರಾಷ್ಟ್ರ ಭಕ್ತರ ಪ್ರತಿಮೆಗಳನ್ನು ಧ್ವಂಸ ಮಾಡುವುದು ಅಪರಾಧ. ನಾಡಿನ ಹಿರಿಯ, ದೇಶಭಕ್ತರ ಗೌರ ಉಳಿಸುವ ಕೆಲಸ ನಾವು ಮಾಡಬೇಕು ಅವರಿಗೆ ಅಪಮಾನ ಮಾಡುವ ಮೂಲಕ ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವುದು ಸರಿಯಲ್ಲ ಎಂದರು.
ಘಟನೆಯ ಹಿಂದೆ ಅಧಿವೇಶನ ಅಡ್ಡಿಪಡಿಸುವುದು ಮಾತ್ರವಲ್ಲ, ಇದರ ಹಿಂದೆ ಬೇರೆಯೇ ಉದ್ದೇಶವಿದೆ. ನಾವು ಇಂತಹ ಪುಂಡರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
PublicNext
18/12/2021 10:31 am