ಗದಗ: ಆರೋಗ್ಯ ದೃಷ್ಟಿಯಿಂದ ಮಕ್ಕಳಿಗೆ ಮೊಟ್ಟೆ ಕೊಡುವುದು ಸೂಕ್ತ ಎಂದು ಸಚಿವ ಶ್ರಿರಾಮುಲು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಕ್ಕಳಿಗೆ ಮೊಟ್ಟೆ ನೀಡುವ ವಿಚಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಮಠಾಧೀಶರಿಗೆ ಪರೋಕ್ಷವಾಗಿ ಉತ್ತರಿಸಿದ್ದಾರೆ.
ಮೊಟ್ಟೆ ತಿನ್ನುವ ಮಕ್ಕಳು ಮೊಟ್ಟೆ ತಿನ್ನಲಿ..ಹಾಲು ಕುಡಿಯುವ ಮಕ್ಕಳು ಹಾಲು ಕುಡಿಯಲಿ, ಈ ಬಗ್ಗೆ ಚರ್ಚೆ ಬೇಡವೆ ಬೇಡ. ಮಕ್ಕಳ ಆರೋಗ್ಯ ದೃಷ್ಟಿ ಅಷ್ಟೇ ಇಲ್ಲಿ ಮುಖ್ಯ,ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕಷ್ಟೇ ಎಂದು ಹೇಳಿರೋ ಬಿ ಶ್ರೀರಾಮುಲು,ಮೊಟ್ಟೆ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
PublicNext
16/12/2021 09:44 pm