ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ವಾಹನ ಹರಿಸಿದ ಪ್ರಕರಣದಲ್ಲಿ ಬಂಧಿತನಾಗಿರುವ ಮಗ ಆಶೀಶ್ ಮಿಶ್ರಾ ಕುರಿತು ಪ್ರಶ್ನೆ ಕೇಳಿದ ಪತ್ರಕರ್ತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಹರಿಹಾಯ್ದಿದ್ದಾರೆ. ಅವರ ಮೈಕ್ ಕಿತ್ತೆಸೆದು, ಅವಾಚ್ಯವಾಗಿ ನಿಂದಿಸಿದ ಘಟನೆ ಮಂಗಳವಾರ ನಡೆದಿದೆ.
ಕಾರ್ಯಕ್ರಮವೊಂದರ ಉದ್ಘಾಟನೆಗಾಗಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರು ತಮ್ಮ ಕ್ಷೇತ್ರಕ್ಕೆ ತೆರಳಿದ್ದರು. ಆಗ ಅವರ ಮಗ ಬಂಧಿತನಾಗಿರುವ ಲಖಿಂಪುರ ಖೇರಿ ಘಟನೆ ಬಗ್ಗೆ ಅವರನ್ನು ಪ್ರಶ್ನಿಸಲಾಗಿತ್ತು. ಇದರಿಂದ ಕಿರಿಕಿರಿಗೊಂಡ ಅಜಯ್ ಮಿಶ್ರಾ, ಮಾಧ್ಯಮದವರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದರು ಎನ್ನಲಾಗಿದೆ. ಈ ಘಟನೆಯದು ಎನ್ನಲಾದ ವಿಡಿಯೋ ಹರಿದಾಡುತ್ತಿದೆ.
'ಇಂತಹ ಮೂರ್ಖ ಪ್ರಶ್ನೆಗಳನ್ನು ಕೇಳಬೇಡಿ. ನಿಮಗೇನು ಹುಚ್ಚೇ? ಇದು ನಾಚಿಕೆಗೇಡು. ಮಾಧ್ಯಮದ ಜನರು ಕಳ್ಳರು. ಆರೋಪಿ ವ್ಯಕ್ತಿಯನ್ನು ಅವರು ಜೈಲಿನಲ್ಲಿ ಇರಿಸಿದ್ದಾರೆ. ನಿಮ್ಮ ಫೋನ್ ಆಫ್ ಮಾಡಿ. ನಿಮಗೆ ಏನು ತಿಳಿಯಬೇಕಿದೆ...' ಎಂದು ಅಜಯ್ ಮಿಶ್ರಾ ಕೂಗಾಡುವುದು ವಿಡಿಯೋದಲ್ಲಿ ದಾಖಲಾಗಿದೆ.
PublicNext
15/12/2021 06:06 pm