ಉಡುಪಿ: ಸಿದ್ಧರಾಮಯ್ಯ ಸಂಘವನ್ನು, ಆರೆಸ್ಸೆಸ್ಸನ್ನು ಪುಂಖಾನುಪುಂಖವಾಗಿ ಬೈಯ್ಯುತ್ತಾ ಓಡಾಡುತ್ತಾರೆ. ಸಿದ್ದರಾಮಯ್ಯಗೆ ಉತ್ತರ ಕೊಟ್ಟರೆ ಕೊಚ್ಚೆಗೆ ಕಲ್ಲು ಹೊಡೆದಂತೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನೆ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಲೇವಡಿ ಮಾಡಿದ್ದಾರೆ.
ಉಡುಪಿಯ ಟೌನ್ ಹಾಲ್ ನಲ್ಲಿ ಶಕ್ತಿಕೇಂದ್ರ ಪ್ರಮುಖರ ಸಭೆಯಲ್ಲಿ ಭಾಷಣ ಮಾಡಿದ ಅವರು,ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ಸಂದರ್ಭ ಬದುಕಿಗೆ ಬೆಂಕಿ ಬಿದ್ದಂತೆ ಆಡಿದರು.ಸಾವರ್ಕರ್ ಜೀವನ ಪ್ರತಿ ಯುವಕರಿಗೆ ತಲುಪಿಸಬೇಕು.ಸಿದ್ದರಾಮಯ್ಯ ಈಗಾಗಲೇ ಕಸದ ಬುಟ್ಟಿಯಲ್ಲಿದ್ದಾರೆ.ಮುಂದೆ ಅವರು ದೊಡ್ಡ ಕಸದ ಬುಟ್ಟಿಗೆ ಹೋಗುತ್ತಾರೆ.
ಸಿದ್ದರಾಮಯ್ಯ ಅವರ ಎಲ್ಲ ಮಾತಿಗೆ ಉತ್ತರ ಕೊಡಬೇಕಾಗಿಲ್ಲ.ಜನರು ಬಿಜೆಪಿಗೆ ಮತ ಕೊಟ್ಟದ್ದು ಅಭಿವೃದ್ಧಿ ವಿಚಾರಕ್ಕಾಗಿ.ಪ್ರತಿ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಗೆ ಉತ್ತರಿಸಬೇಕಾಗಿಲ್ಲ ಎಂದರು.
PublicNext
15/12/2021 03:12 pm