ಬೆಳಗಾವಿ: ಖಾನಾಪುರ ಸಮಗ್ರ ಅಭಿವೃದ್ಧಿಗಾಗಿಯೇ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ್ ಸರ್ಕಾರದ ವಿರುದ್ಧ 40 ಕಿಲೋಮೀಟರ್ ದೂರದ ಸಂಘರ್ಷ ಯಾತ್ರೆಯನ್ನ ಇಂದು ಆರಂಭಿಸಿದ್ದಾರೆ.
ಬೆಳಗಾವಿಯಲ್ಲಿ ನಾಳೆ ನಡೆಯಲಿರೋ ಚಳಿಗಾಲದ ಅಧಿವೇಷನದ ಹಿನ್ನೆಲೆಯಲ್ಲಿಯೇ, ಇಂದು ಸಂಘರ್ಷ ಪಾದಯಾತ್ರೆಯನ್ನ ಶಾಸಕಿ ಅಂಜಲಿ ನಿಂಬಾಳಕರ್ ಆರಂಭಿಸಿದ್ದಾರೆ.
ಖಾನಾಪುರ ದಿಂದ ಗರ್ಲಗುಂಜಿ,ರಾಜಹಂಸಗಡ, ಯಳ್ಳೂರು ತಲುಪಲಿ, ನಾಳೆ ಬೆಳಗಿನ ಜಾವ ಯಳ್ಳೂರಿನಿಂದ ವಡಗಾವಿ,ಯಡಿಯೂರಪ್ಪ ಮಾರ್ಗ ವಾಗಿ ಸುವರ್ಣ ಸೌಧವನ್ನ ತಲುಪಲಿದೆ ಅಂಜಲಿ ನಿಂಬಾಳಕರ್ ಸಂಘರ್ಷ ಯಾತ್ರೆ.
ಸುವರ್ಣ ಸೌಧದ ಹೈವೇಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಕೈ ಶಾಸಕರು ಅಂಜಲಿ ನಿಂಬಾಳಕರ್ ಅವರ ಈ ಪಾದಯಾತ್ರೆಯಲ್ಲಿ ಭಾಗಿ ಆಗಲಿದ್ದಾರೆ.
PublicNext
12/12/2021 06:37 pm