ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಸೆಂಬರ್-13 ರಿಂದ 3 ದಿನ ಸಿಎಂ ರಾಜ್ಯದಲ್ಲಿ ಇರೋದಿಲ್ಲ-ಯಾಕ್ ಗೊತ್ತೇ ?

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 3 ದಿನಗಳ ಕಾಲ ಉತ್ತರ ಪ್ರದೇಶದ ಪ್ರವಾಸ ಕೈಗೊಂಡಿದ್ದಾರೆ. ಕುಟುಂಬ ಸಮೇತವೇ ಇದೇ ಡಿಸೆಂಬರ್-13 ರಂದು ಸಿಎಂ ಪ್ರವಾಸ ಹೊರಟಿದ್ದಾರೆ.

ಸೋಮವಾರ ಅಧಿವೇಶದನಲ್ಲಿ ಭಾಗಿ ಆಗುತ್ತಾರೆ ಸಿಎಂ ಬಸವರಾಜ್ ಬೊಮ್ಮಾಯಿ. ಬಳಿಕವೆ ಅಂದ್ರೆ ಮಂಗಳವಾರ ಕಾಶಿ ಮತ್ತು ಅಯೋಧ್ಯಾಗೆ ಭೇಟಿ ಕೊಡಲಿದ್ದಾರೆ. ವಿಶೇಷ ವಿಮಾನದ ಮೂಲಕ ವಾರಾಣಸಿಗೂ ಹೋಗುತ್ತಿದ್ದಾರೆ.ಗಂಗಾ ಆರತಿಯಲ್ಲೂ ಭಾಗವಹಿಸುತ್ತಿದ್ದಾರೆ.

ಇನ್ನು ಮಂಗಳವಾರ 13 ರಂದು ಸಾರನಾಥದಲ್ಲಿರೋ ಬೌದ್ಧ ಧರ್ಮದ ಪವಿತ್ರ ಸ್ಥಳಕ್ಕೂ ಭೇಟಿಕೊಡಲಿದ್ದಾರೆ. ಪಂಡಿತ್ ದೀನ ದಯಾಳ್ ಉಪಾಧ್ಯಾಯ ಸ್ಮಾರಕಕ್ಕೆ ಭೇಟಿಕೊಡ್ತಿದ್ದಾರೆ. ಬುಧವಾರ ಅಯೋಧ್ಯೆಗೆ ತೆರಳಿ ರಾಮಜನ್ಮಭೂಮಿಗೂ ಭೇಟಿ ಕೊಡಲಿದ್ದಾರೆ.

Edited By :
PublicNext

PublicNext

11/12/2021 12:48 pm

Cinque Terre

17.76 K

Cinque Terre

1

ಸಂಬಂಧಿತ ಸುದ್ದಿ