ಬೀದರ್: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಲೇಡಿ ಪಿಎಸ್‌ಐಯನ್ನ ಪ್ರಚಾರ ಸಭೆಯಿಂದಲೇ ಹೊರ ಕಳಿಸಿದ ಘಟನೆ ಇಂದು ಬೀದರ್ ನಲ್ಲಿ ನಡೆದಿದೆ. ಅಂದ್ಹಾಗೆ ಲೇಡಿ ಪಿಎಸ್‌ಐಯನ್ನ ಸಿಎಂ ಹೊರಗೆ ಕಳಿಸಿದ್ದೇಕೆ. ಬನ್ನಿ,ಹೇಳುತ್ತೇವೆ.
ಬಸವರಾಜ್ ಬೊಮ್ಮಾಯಿ ಸದ್ಯ ವಿಧಾನಪರಿಷತ್ ಚುನಾವಣೆ ಪ್ರಚಾರದಲ್ಲಿದ್ದಾರೆ. ಬೀದರ್ ನಲ್ಲಿ ಇಂದು ನಡೆದ ಪ್ರಚಾರ ಸಭೆಯಲ್ಲಿ ಭಾಷೆ ಮಾಡುವ ವೇಳೆ ಲೇಡಿ ಪಿಎಸ್‌ಐ ಗುಸುಗು ಅಂತ ಮಾತನಾಡುತ್ತಿದ್ದರು. ವೇದಿಕೆ ಸುತ್ತಲೂ ತಿರುಗಾಟವನ್ನೂ ಮಾಡುತ್ತಿದ್ದರು.
ಇದರಿಂದ ಬೇಸರಗೊಂಡ ಬಸವರಾಜ್ ಬೊಮ್ಮಾಯಿ ಅವ್ರು ನಿಮ್ಮ ಅಗತ್ಯ ನಮಗೆ ಇಲ್ಲ.ನಮ್ಮದು ಶಿಸ್ತಿನ ಪಕ್ಷ.ನಮ್ಮ ಕಾರ್ಯಕರ್ತರೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ನೀವು ಹೊರಗೆ ಹೊರಟು ಬಿಡಿ ಅಂತ ಹೇಳಿದ್ದಾರೆ. ಸಭೆ ಆರಂಭಕ್ಕೂ ಮುನ್ನ
ಲೇಡಿ ಪಿಎಸ್‌ಐ ವೇದಿಕೆ ಮೇಲಿದ್ದ ಎಲ್ಲ ಕಾರ್ಯಕರ್ತರನ್ನ ಕೆಳಗಿಸಿದ್ದರು.
PublicNext
06/12/2021 02:14 pm