ಬೆಂಗಳೂರು:ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೆಹಲಿ ಭೇಟಿಯ ನಂತರ ಬಸವನಗೌಡ ಪಾಟೀಲ್ ಯತ್ನಾಳರ ಆ ಒಂದು ಹೇಳಿಕೆ ಈಗ ಭಾರಿ ಸಂಚಲನ ಸೃಷ್ಟಿಸಿದೆ.ಡಿಸೆಂಬರ್-10 ನಂತರ ರಾಜ್ಯದ ರಾಜಕೀಯದಲ್ಲಿ ಭಾರಿ ಬದಲಾವಣೆ ಆಗುತ್ತದೆ ಅಂತಲೇ ಯತ್ನಾಳ ಭವಿಷ್ಯ ನುಡಿದು ಕುತೂಹಲ ಕೆರಳಸಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಬಸವನಗೌಡ ಪಾಟೀಲ್ ಯತ್ನಾಳ್, ಪೂರ್ಣ ಸಚಿವ ಸಂಪುಟವೇ ಪುನಾರಚನೆ ಆಗುವ ಸಾಧ್ಯತೆ ಇದೆ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಇದೇ ವೇಳೆ ಕೆಲವು ಸಚಿವರ ವಿರುದ್ಧ ವಾಗ್ದಾಳಿಯನ್ನೂ ನಡೆಸಿದ್ದಾರೆ. ಇವರು ವಿಧಾನ ಸೌಧಕ್ಕೆ ಬರೋದಿಲ್ಲ. ಶಾಸಕರ ಸಮಸ್ಯೆಗಳಿಗೆ ಸ್ಪಂದಿಸೋದಿಲ್ಲ ಅಂತಲೂ ಟೀಕಿಸಿದ್ದಾರೆ. ದಿನ ಬೆಳಗಾದರೆ ಮುಖ್ಯಮಂತ್ರಿಗಳ ಬಾಲಂಗೋಚಿಯಂತೆ ತಿರುಗುತ್ತಾರೆ ಅಂತಲೂ ದೂರಿದ್ದಾರೆ.
PublicNext
03/12/2021 12:10 pm