ಬೆಳಗಾವಿ: ಡಿಸೆಂಬರ್ 13ರಂದು ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ಹಿನ್ನೆಲೆಯಲ್ಲಿ ನಗರದ ಸುವರ್ಣಸೌಧದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಮೂರು ವರ್ಷಗಳ ಬಳಿಕ ಬೆಳಗಾವಿಯಲ್ಲಿ ಅಧಿವೇಶನ ನಡೀತಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆ ಅಧಿವೇಶನ ನಡೆಸಲಾಗಲಿಲ್ಲ,ಅಧಿವೇಶನ ನಡೆಸಲು ಅನೇಕ ಸವಾಲುಗಳಿವೆ.ಕೋವಿಡ್ ಬೇರೆ ಬೇರೆ ಸ್ಥಿತಿಗಳು ಸಾಕಷ್ಟು ಆತಂಕ ತಂದಿವೆ. ಕೋವಿಡ್ ನಿಯಂತ್ರಣದಲ್ಲಿ ಇರಲು ಎಲ್ಲ ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ಸಿದ್ಧತೆ ಮಾಡಿ ಮುನ್ನಡೆಯುತ್ತೇವೆ ಎಂದರು.
ಕೋವಿಡ್ ನಿಯಂತ್ರಣದಲ್ಲಿ ಇರುತ್ತೆ ಎಂಬ ವಿಶ್ವಾಸ ಇದೆ.ಅತಿವೃಷ್ಟಿಯಿಂದ ಆದಂತಹ ಕಷ್ಟದ ಸಂದರ್ಭವೂ ಇದೆ.ಅತಿವೃಷ್ಟಿ ಪರಿಹಾರ ಸಮರ್ಥವಾಗಿ ಮಾಡಲು ಹೇಳಿದ್ದೇವೆ, ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಪರಿಷತ್ ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ.ಜಿಲ್ಲಾಡಳಿತ ಮೇಲೆ ದೊಡ್ಡ ಜವಾಬ್ದಾರಿ ಇದ್ದು ಆ ಸವಾಲವೂ ಇದೆ ಎಂದರು.
ಈ ಅಧಿವೇಶನ ಚೆನ್ನಾಗಿ ನಡೆಸುವ ಸವಾಲು ನಮ್ಮ ಮುಂದೆ ಇದೆ.ಇದನ್ನ ಸವಾಲಾಗಿ ಸ್ವೀಕರಿಸಿ ಜಿಲ್ಲಾಡಳಿತ ಜೊತೆ ಪೂರ್ವ ಸಿದ್ಧತೆ ಸಭೆ ನಡೆಸಿದ್ದೇವೆ. ಶಾಸಕರು, ಸಿಬ್ಬಂದಿ, ಅಧಿಕಾರಿ ವರ್ಗ, ಮಾಧ್ಯಮ ಸಿಬ್ಬಂದಿ ವಸತಿಗೆ ವ್ಯವಸ್ಥೆ ನಡೆದಿದೆ. ಆಹಾರದ ವ್ಯವಸ್ಥೆಯೂ ಅತಿ ಮುಖ್ಯ ಜವಾಬ್ದಾರಿಯುತವಾಗಿ ಮಾಡಲು ಸೂಚನೆ ಕೊಡಲಾಗಿದೆಂದರು.
ಇನ್ನೂ ನೂರಾರು ಕೆಲಸಗಳು ಇವೆ, ಅಧಿಕಾರಿಗಳು ಮಾಡ್ತಿದ್ದಾರೆ ಎಲ್ಲರೂ ಪೂರ್ವಭಾವಿ ಸಿದ್ಧತೆ ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅಧಿವೇಶನ ನೋಡಲು ಬರಲು ಅವಕಾಶ ಇಲ್ಲ, ಸಾರ್ವಜನಿಕರಿಗೆ ಇದೆ. ಹತ್ತು ದಿನಗಳಲ್ಲಿ ಎಲ್ಲಾ ಕಲಾಪಗಳು, ನಿಲುವಳಿ ಸೂಚನೆ, ಚರ್ಚೆ ವಿಷಯ ಎಲ್ಲಾ ಕಾರ್ಯಕಲಾಪ ವ್ಯವಸ್ಥಿತವಾಗಿ ನಡೆಯುತ್ತೆ.ಸರ್ಕಾರದಿಂದ ಈವರೆಗೂ ಯಾವುದೂ ಬಿಲ್ ಬಂದಿಲ್ಲ, ಇನ್ನೂ ಅವಕಾಶ ಇದೆ. ಒಂದು ವಾರದ ಮುಂಚೆ ಬಿಲ್ ಮಂಡಿಸುವುದಿದ್ರೆ ಕಳಿಸಲು ಸೂಚನೆ ಕೊಡಲಾಗಿದೆ.ಒಂದು ಆರ್ಡಿನೆನ್ಸ್ ಇದೇ ಅದು ಆಗಲೇಬೇಕು. ಕಲಾಪ ಚನ್ನಾಗಿ ನಡೆಸುವ ಪ್ರಯತ್ನ ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚಿಸುವ ನಿರೀಕ್ಷೆ ಸಾರ್ವಜನಿಕರಿಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
PublicNext
02/12/2021 02:40 pm