ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಹೊಡೆತಕ್ಕೆ 'ಹುಡುಗ ರಾಹುಲ್' ಇಟಲಿಗೆ ಓಡಿ ಹೋಗ್ತಾರೆ: ಆನಂದ್ ಸಿಂಗ್

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಹೊಡೆತಕ್ಕೆ ಕಾಂಗ್ರೆಸ್ ನ ‘ಹುಡುಗ’ ರಾಹುಲ್ ಗಾಂಧಿ ಅವರು ಬಹಳ ದಿನ ರಾಜಕೀಯದಲ್ಲಿ ಉಳಿಯುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವರೂ ಆದ ಪರಿಸರ ಖಾತೆ ಸಚಿವ ಆನಂದ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲೂಕಿನ ಕಂಬತ್ತಹಳ್ಳಿ ಮರುಳುಸಿದ್ದಪ್ಪ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಅವರ ಸರಿ ಸಮಾನವಾಗಿ ನಿಲ್ಲಲ್ಲು ರಾಹುಲ್ ಗಾಂಧಿ ಅವರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಮೋದಿ ಅವರ ಸಮಕ್ಕೆ ನಿಲ್ಲಲ್ಲು ಆಗದ ರಾಹುಲ್ ಗಾಂಧಿ, ಮೋದಿ ಅವರ ಹೊಡೆತಕ್ಕೆ ಇಟಲಿ ಕಡೆ ಹೋಗಿ ಬಿಡುತ್ತಾರೆ ಎಂದು ಟೀಕಿಸಿದರು.

Edited By : Nagaraj Tulugeri
PublicNext

PublicNext

28/11/2021 10:42 pm

Cinque Terre

68.86 K

Cinque Terre

10