ಬಾಗಲಕೋಟೆ: ಮುರುಗೇಶ್ ನಿರಾಣಿ ಆದಷ್ಟು ಬೇಗ ಮುಖ್ಯಮಂತ್ರಿ ಆಗುತ್ತಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಹಿಂದುಳಿದ ವರ್ಗದ ಘಟಕದ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ಗೊತ್ತಿಲ್ಲ... ಮುಂದೆ ಯಾವತ್ತೋ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗ್ತಾರೆ. ಅವರಿಗೆ ಆ ಶಕ್ತಿ ಇದೆ. ಹಾಗಂತ ನಾಳೆನೇ ಬಸವರಾಜ ಬೊಮ್ಮಾಯಿನಾ ತೆಗೆಯುತ್ತಾರಾ? ಅಂತ ಬರೆಯಬೇಡಿ. ಯಾವತ್ತೋ ಆಗೋ ಶಕ್ತಿ ಇದೆ. ಕರ್ತೃ ಶಕ್ತಿ ಇದೆ. ಹಾಗಾಗಿ ಅವರು ಇವತ್ತಲ್ಲ ನಾಳೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಇನ್ನು ಈಶ್ವರಪ್ಪ ಭಾಷಣಕ್ಕೆ ಫುಲ್ ಖುಷಿಯಾಗಿದ್ದ ಮುರುಗೇಶ್ ನಿರಾಣಿ ಸಕ್ಸಸ್ ಗುರುತು ತೋರಿ ನಗುತ್ತ ಕುಳಿತಿದ್ದರು.
PublicNext
28/11/2021 08:17 pm