ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮೋದಿಯೊಂದಿಗೆ ಹೆಜ್ಜೆ ಹಾಕಿದ ಫೋಟೋವೊಂದನ್ನು ಶೇರ್ ಮಾಡಿಕೊಂಡು ಅದಕ್ಕೆ ಕವನದ ಸಾಲುಗಳನ್ನು ಬರೆದಿದ್ದರು.
ಇನ್ನು ವೈರಲ್ ಆದ ಫೋಟೋಗೆ ಮಿಶ್ರ ಕಮೆಂಟ್ ಗಳು ಬಂದಿದ್ದವು ಸದ್ಯ ಅದೇ ಫೋಟೋವನ್ನು ಶೇರ್ ಮಾಡಿದ ಪ್ರತಿಪಕ್ಷ ಕಾಂಗ್ರೆಸ್ ಇಲ್ಲಿಯೂ ವ್ಯಂಗ್ಯವಾಡಿದೆ. ಕ್ಯಾಂಡಿಡ್ ನಂತೆ ಕಾಣುವ ಈ ಫೋಟೋಗಳು ಖಂಡಿತ ಕ್ಯಾಂಡಿಡ್ ಅಲ್ಲ. ಪಕ್ಕಾ ಪೋಸ್ ಎಂದು ಹೇಳಿದೆ.
ಕೆಲವು ಕಾಂಗ್ರೆಸ್ ನಾಯಕರು ತಮ್ಮ ಟ್ವಿಟರ್ ನಲ್ಲಿ ಎರಡೂ ಫೋಟೋಗಳನ್ನು ಶೇರ್ ಮಾಡಿಕೊಂಡು ಇವೆರಡೂ ಫೋಟೋಗಳ ಮಧ್ಯೆ ಇರುವ ವ್ಯತ್ಯಾಸವನ್ನೂ ತೋರಿಸಿದ್ದಾರೆ. ಎರಡೂ ಫೋಟೋಗಳು ಒಂದೇ ಬಾರಿ ತೆಗೆದಿದ್ದಾದರೆ, ಕ್ಯಾಂಡಿಡ್ ಆಗಿದ್ದರೆ ಹೀಗೇಕೆ ವಿಭಿನ್ನತೆ ಗೋಚರಿಸುತ್ತಿತ್ತು? ಪ್ರಧಾನಿ ಮೋದಿಯವರ ಉಡುಪಿನಲ್ಲೇಕೆ ಬದಲಾವಣೆ ಆಗುತ್ತಿತ್ತು ಎಂಬುದು ಕಾಂಗ್ರೆಸ್ಸಿಗರ ಪ್ರಶ್ನೆ.
ಈ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲವೂ ಸರಿಯಾಗಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ ಒಂದು ಫೋಟೋದಲ್ಲಿ ಪ್ರಧಾನಿ ಮೋದಿಯವರು ಹೆಗಲಿಗೆ ಅಂಗೋಚಾ ಹೊದ್ದಿದ್ದಾರೆ. ಇನ್ನೊಂದರಲ್ಲಿ ಶಾಲು ಹಾಕಿಕೊಂಡಿದ್ದಾರೆ. ಎದುರಿನಿಂದ ತೆಗೆದ ಫೋಟೋದಲ್ಲಿ ಮೋದಿಯವರ ಮುಖದಲ್ಲಿ ಕಿರಿಕಿರಿ ಮತ್ತು ಭಯ ಎದ್ದು ಕಾಣುತ್ತಿದೆ. ಈ ಫೋಟೋದಿಂದ ಯೋಗಿಯವರಿಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಲಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶಿರಂತೆ ಹೇಳಿದ್ದಾರೆ.
PublicNext
22/11/2021 10:28 pm