ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ-ಯೋಗಿ ಜೋಡಿ ಕವಿತೆ ಬರೆದ ಸಿಎಂ

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮೋದಿಯೊಂದಿಗೆ ಹೆಜ್ಜೆ ಹಾಕಿದ ಫೋಟೋವೊಂದನ್ನು ಶೇರ್ ಮಾಡಿಕೊಂಡು ಅದಕ್ಕೆ ಕವನದ ಸಾಲುಗಳನ್ನು ಬರೆದಿದ್ದಾರೆ.

ಆ ಕವನದ ಸಾಲುಗಳು ‘ನಾವು ಪ್ರತಿಜ್ಞೆಯೊಂದಿಗೆ ಮುನ್ನಡೆಯುತ್ತಿದ್ದೇವೆ… ನಮ್ಮ ತನು-ಮನವನ್ನು ಅರ್ಪಿಸಲು ನಿರ್ಧರಿಸಿದ್ದೇವೆ… ಆಕಾಶದೆತ್ತರಕ್ಕೆ ಹೋಗಲು ಮತ್ತು ನವಭಾರತ ನಿರ್ಮಾಣ ಮಾಡಲು…’

56ನೇ ಡಿಜಿಪಿ-ಐಜಿಪಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಲಖನೌಗೆ ತೆರಳಿದ್ದರು. ಅಲ್ಲಿ ಯೋಗಿಯವರ ಜತೆ ಮಾತುಕತೆ ನಡೆಸಿದ ಬಳಿಕ ಇಂದು ದೆಹಲಿಗೆ ವಾಪಸ್ ಬರಲಿದ್ದಾರೆ. ಈ ಸಮಯದಲ್ಲಿ ಆದಿತ್ಯನಾಥ್ ಅವರು ತಾವು ಪ್ರಧಾನಿ ಮೋದಿಯವರೊಂದಿಗೆ ಇರುವ ಎರಡು ಫೋಟೋಗಳನ್ನು ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಈ ಕವನ ಬರೆದಿದ್ದಾರೆ.

ಸದ್ಯ ಈ ಫೋಟೋಗೆ ಸಾಕಷ್ಟು ಪ್ರಶಂಸೆಗಳ ಸುರಿಮಳೆಯೂ ಬಂದಿವೆ. ಜತೆಗೆ ಕೆಲವು ವ್ಯಂಗ್ಯ ಟೀಕೆಗಳೂ ಬಂದಿವೆ. ಸಮಾಜವಾದಿ ಪಕ್ಷ ಈ ಟ್ವೀಟ್ ನೋಡಿ ವ್ಯಂಗ್ಯವಾಡಿದೆ. ಎಸ್ ಪಿ ವಕ್ತಾರ ಅನುರಾಗ್ ಭಡೌರಿಯಾ ಪ್ರತಿಕ್ರಿಯೆ ನೀಡಿದ್ದು, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸವೇ ಹೆಚ್ಚಾಗಿದೆ. ಹಾಗಾಗಿ ಈ ಬಾರಿ ಅಖಿಲೇಶ್ ಅವರೇ ಗೆಲ್ಲಬಹುದು ಎಂದು ಪ್ರಧಾನಿ ಮೋದಿ, ಯೋಗಿ ಜೀ ಅವರಿಗೆ ಹೇಳುತ್ತಿರಬಹುದು ಎಂದು ಅಣಕಿಸಿದ್ದಾರೆ.

Edited By : Nirmala Aralikatti
PublicNext

PublicNext

21/11/2021 09:37 pm

Cinque Terre

98.94 K

Cinque Terre

8

ಸಂಬಂಧಿತ ಸುದ್ದಿ