ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾನೂನುಗಳು ನಿಜಕ್ಕೂ ರೈತರಿಗೆ ಪ್ರಯೋಜನಕಾರಿಯಾಗಿದ್ದವು. ಅದರ ಹಿಂದೆ ರೈತರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನ ತರುವ ಪ್ರಧಾನಿಯ ಸ್ಪಷ್ಟ ಉದ್ದೇಶಗಳಿದ್ದವು ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.
ಕಾಯ್ದೆ ಬಗ್ಗೆ ಜನರಿಗೆ ತಿಳಿಸಲು ಸಾಕಷ್ಟು ಪ್ರಯತ್ನಿಸಿದೆವು. ಆದ್ರೆ, ಕೆಲ ರೈತರು ಕಾಯ್ದೆಯನ್ನು ಒಪ್ಪಿಕೊಳ್ಳಲು ಸಿದ್ಧರಾಗಿಲ್ಲ. ಹೀಗಾಗಿ 3 ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ನಿರ್ಧರಿಸಲಾಯ್ತು. ಗುರು ನಾನಕ್‌ರ ಜಯಂತಿಯಂದೇ ಪ್ರಧಾನಿ ಮೋದಿ ಘೋಷಿಸಿದ್ದಾರೆ ಎಂದರು.
ಇನ್ನು “ಸಂಸತ್ತು ಅಂಗೀಕರಿಸಿದ ಮೂರು ಮಸೂದೆಗಳನ್ನ ಪ್ರಧಾನಿ ತಂದಿದ್ದರು. ಅವು ರೈತರಿಗೆ ಪ್ರಯೋಜನಕಾರಿಯಾಗುತ್ತಿದ್ದವು. ಅದರ ಹಿಂದೆ ರೈತರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನ ತರುವ ಪ್ರಧಾನಿಯ ಸ್ಪಷ್ಟ ಉದ್ದೇಶಗಳಿದ್ದವು. ಆದ್ರೆ, ದೇಶದ ಕೆಲವು ರೈತರಿಗೆ ಪ್ರಯೋಜನಗಳನ್ನು ವಿವರಿಸಲು ನಾವು ವಿಫಲರಾಗಿದ್ದೇವೆ ಎನ್ನುವ ನೋವು ನನಗಿದೆ” ಎಂದು ತೋಮರ್ ಎಎನ್‌ಐಗೆ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
PublicNext
19/11/2021 07:14 pm