ಬೆಳಗಾವಿ:ಮೂರು ಕೃಷಿ ಕಾಯ್ದೆಯನ್ನ ಕೇಂದ್ರ ಸರ್ಕಾರ ವಾಪಸ್ ಪಡೆಯುತ್ತದೆಯೋ ಇಲ್ಲವೋ ಅನ್ನೋ ಆತಂಕ ಇತ್ತು.ಆದರೆ ಕೃಷಿ ಕಾಯ್ದೆ ಹಿಂಪಡೆದಿರೋದು ಆಶ್ಚರ್ಯ ಮೂಡಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಸ್ ಪಡೆಯುವ ಮೂಲಕ ಒಳ್ಳೆ ಕೆಲಸ ಮಾಡಿದೆ ಅಂತ ನಾನು ಹೇಳೋದಿಲ್ಲ.ಕೃಷಿ ಕಾಯ್ದೆ ವಿರೋಧಿಸಿ ಹರಿಯಾಣ, ಪಂಜಾಬ್, ಉತ್ತರಪ್ರದೇಶದಲ್ಲಿ ರೈತರು ಚಳಿ-ಗಾಳಿ-ಮಳೆ ಎನ್ನದೇ ಸುದೀರ್ಘ ಹೋರಾಟ ಮಾಡಿದ್ದಾರೆ. ಈ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಈ ಕೆಲಸ ಮಾಡಿದೆ ಅಷ್ಟೇ.ಆದರೆ ಇದೇ ಕೆಲಸವನ್ನ ಆರಂಭದಲ್ಲಿಯೆ ಮಾಡಿದ್ದರೇ ಗೌರವ ಸಿಗುತ್ತಿತ್ತು ಅಂತಲೇ ಸತೀಶ್ ಜಾರಕಿಹೊಳಿ ಚುಚ್ಚಿದ್ದಾರೆ.
ಇದು ರೈತರಿಗೆ ಸಿಕ್ಕ ಜಯ ಅಂತಲೇ ನಾವು ಸಂತೋಷ ಪಡುತ್ತಿದ್ದೇವೆ.ಕಾಂಗ್ರೆಸ್ ಪಕ್ಷ ಸಹ ರೈತರ ಪರವಾಗಿಯೇ ಹೋರಾಟ ಮಾಡುತ್ತಿದೆ ಅಂತಲೇ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
PublicNext
19/11/2021 05:20 pm