ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೇತ್ರದಾನಕ್ಕೆ ಒಪ್ಪಿಗೆ ಪತಿಯೊಂದಿಗೆ ಸಹಿ ಹಾಕಿದ ಶಾಸಕಿ ಕೆ. ಪೂರ್ಣಿಮಾ

ಹಿರಿಯೂರು : ನಮ್ಮ ಸಾವಿನ ನಂತರ ಮತ್ತೊಬ್ಬರ ಬಾಳಲ್ಲಿ ಹೊಸ ಬೆಳಕನ್ನು ತರಲು ಇಂದೇ ಪ್ರತಿಜ್ಞೆ ಮಾಡಿರಿ ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಸಾರ್ವಜನಿಕರಿಗೆ ಕರೆ ನೀಡಿದರು.

ನಾವು ಮಾಡುವ ನೇತ್ರದಾನ ನಮ್ಮ ನಿಧನದ ನಂತರ ನಾವು ಬಿಟ್ಟುಹೋಗುವ ಅತ್ಯಮೂಲ್ಯವಾದ ಬೆಲೆಕಟ್ಟಲಾಗದ ಜೀವಂತ ಆಸ್ತಿಗಳು, ಅಂಧತ್ವದಿಂದ ಬಳಲುತ್ತಿರುವ ಎರಡು ಜೀವಗಳಿಗೆ ನಮ್ಮ ನಿಧನದ ನಂತರ ಅವರ ಬಾಳಲ್ಲಿ ಬೆಳಕಾಗುವ ಉದ್ದೇಶದಿಂದ ನೇತ್ರದಾನ ಮಾಡಲು ನಾನು ಪ್ರತಿಜ್ಞೆ ಮಾಡಿ ಸಹಿ ಹಾಕಿದ್ದೇನೆ ಎಂದು ಹೇಳಿದರು.

ಶಾಸಕಿ ಕೆ. ಪೂರ್ಣಿಮಾ ಜೊತೆ ಪತಿ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ಪ್ರವರ್ಗ -1 ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಕೂಡ ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿ, ಸಹಿ ಹಾಕಿದ್ದಾರೆ. ಈ ಮೂಲಕ ಪ್ರತಿಯೊಬ್ಬರೂ ತಮ್ಮ ಮರಣದ ನಂತರ ತಮ್ಮ ಅತ್ಯಮೂಲ್ಯವಾದ ಕಣ್ಣುಗಳನ್ನು ದಾನ ಮಾಡುವ ಮೂಲಕ ಕತ್ತಲೆ ತುಂಬಿರುವ ಇತರೆ ಜೀವಿಗಳ ಬಾಳಿಗೆ ಬೆಳಕಾಗಲು ಸಹಯವಾಗಿ ಎಂದು ದಂಪತಿಗಳಿಬ್ಬರು ಮನವಿ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

17/11/2021 06:44 pm

Cinque Terre

22.71 K

Cinque Terre

0

ಸಂಬಂಧಿತ ಸುದ್ದಿ