ಹಾಸನ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಎದುರೇ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಹೌದು. ಜನವರಿಯಲ್ಲಿ ತೆರವಾಗುತ್ತಿರುವ ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ ಹಿನ್ನೆಲೆ ಜಿಲ್ಲೆಯ ಸಂಸದ ಪ್ರಜ್ವಲ್ ರೇವಣ್ಣ ಅವರ ಅಧಿಕೃತ ನಿವಾಸದಲ್ಲಿ ಜೆಡಿಎಸ್ ಶಾಸಕರು, ಮುಖಂಡರು, ಕಾರ್ಯಕರ್ತರ ಸಭೆ ನಡೆಸಿದರು. ಅಭ್ಯರ್ಥಿ ಆಯ್ಕೆ ಸಂಬಂಧ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕರಾದ ಎಚ್.ಡಿ.ರೇವಣ್ಣ, ಕೆ.ಎಸ್.ಲಿಂಗೇಶ್, ಮಾಜಿ ಶಾಸಕರು, ಜಿ.ಪಂ. ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಯಿತು. ಆದರೆ ಈ ಸಭೆ ಬಗ್ಗೆ ಮಾಹಿತಿ ನೀಡಿಲ್ಲವೆಂದು ಶಿವಲಿಂಗೇಗೌಡ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
"ಹೆಚ್.ಡಿ. ದೇವೇಗೌಡ ಸಮ್ಮುಖದಲ್ಲಿ ಸಭೆ ಅಂದುಕೊಂಡಿದ್ದೆ. ಇಂತಹ ಸಭೆ ಅಂದಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ. ನೀವೇನಾದ್ರೂ ಅಂದುಕೊಳ್ಳಿ ನಾನು ನೇರವಾಗೇ ಹೇಳುತ್ತೇನೆ. ದೇವೇಗೌಡ, ಕುಮಾರಸ್ವಾಮಿ ಹೆಸರು ಹೇಳಿದರೆ ಮತ ಬರಲ್ಲ. ಸಭೆ ಬಗ್ಗೆ ಏಕೆ ಹೇಳಿಲ್ಲ" ಎಂದು ಶಿವಲಿಂಗೇಗೌಡ ಅವರು ಹೆಚ್.ಕೆ. ಕುಮಾರಸ್ವಾಮಿಗೆ ಪ್ರಶ್ನಿಸಿದರು.
"ಏಯ್ ಕುಮಾರಸ್ವಾಮಿ ಸುಮ್ಮನಿರಿ ನಂಗೆ ಯಾಕೆ ಸಭೆಗೆ ಹೇಳಿಲ್ಲ. ಬಾಯಿ ಮುಚ್ಚೋ ನೀನು, ಸಾರಿಸೊಕೆ ಬರ್ಬೇಡಾ. ಇವೆಲ್ಲಾ ನನ್ನ ಹತ್ರಾ ನಡೆಯೋದಿಲ್ಲ. ನಮ್ಮ ಕ್ಷೇತ್ರದಲ್ಲಿ 410 ಸದಸ್ಯರನ್ನು ಓಪನ್ ಆಗೇ ವೋಟ್ ಹಾಕಿಸ್ಬೇಕಾ ಹೇಳಿ ಹಾಕಿಸ್ತೇನೆ. ಸಭೆಯ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ. ನೀವು ಯಾರಿಗೆ ಹೇಳ್ತೀರೋ ಅವರಿಗೆ ವೋಟ್ ಹಾಕೊಕೆ ನಾವ್ ರೆಡಿ. ಕಳೆದ ಬಾರಿ ಪಟೇಲ್ ಶಿವರಾಂ ಸೋಲಿಗೆ ನಾನೇ ಕಾರಣ ಎಂದು ನನ್ನ ಮೇಲೆ ಕಳಂಕ ಇದೆ. ನನ್ನ ಹೆತ್ತ ತಾಯಿ, ಇರುವ ಒಬ್ಬ ಮಗನ ಮೇಲಾಣೆ ನಾನು ಮೋಸಗಾರ ಅಲ್ಲಾ" ಎಂದು ಶಿವಲಿಂಗೇಗೌಡ ಆಣೆ ಮಾಡಿದರು.
PublicNext
13/11/2021 08:14 pm