ಕೆಲವು ನಟ,ನಟಿಯರು ಹಾಗೂ ರಾಜಕಾರಣಿಗಳು ನೀಡುವ ಹೇಳಿಕೆಗಳು ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಗಳನ್ನು ಸೃಷ್ಟಿಸಿ ಬಿಡುತ್ತವೆ.
ಸದ್ಯ ಸಂಸದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,ಹಿಂದುತ್ವ ಹಾಗೂ ಆರ್ ಎಸ್ ಎಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕಾಂಗ್ರೆಸ್ ನ ಜನ ಜಾಗರಣ ಅಭಿಯಾನವನ್ನುದ್ದೇಶಿಸಿ ಮಾತನಾಡಿದ ರಾಗಾ ಕಾಂಗ್ರೆಸ್ ತನ್ನ ಸಿದ್ಧಾಂತವನ್ನು ಬಿಜೆಪಿಯಂತೆ ಎಂದಿಗೂ ಆಕ್ರಮಣಕಾರಿಯಾಗಿ ಪ್ರಚಾರ ಮಾಡಿಲ್ಲ. ನಾವು ಇಷ್ಟ ಪಡುತ್ತೇವೋ ಇಲ್ಲವೋ ಎಂಬುದು ಸಂಬಂಧವೇ ಇಲ್ಲದಂತೆ ಆರ್ ಎಸ್ ಎಸ್ ಹಾಗೂ ಬಿಜೆಪಿ ದ್ವೇಷದ ಸಿದ್ಧಾಂತವು ಕಾಂಗ್ರೆಸ್ ನ ಪ್ರೀತಿ, ವಾತ್ಸಲ್ಯ ಹಾಗೂ ರಾಷ್ಟ್ರೀಯವಾದದ ಸಿದ್ಧಾಂತವನ್ನು ಮರೆಮಾಚಿದೆ.
ಹಿಂದೂ ಧರ್ಮ ಹಾಗೂ ಹಿಂದುತ್ವದ ನಡುವಿನ ವ್ಯತ್ಯಾಸಗಳೇನು..? ಇವೆರಡೂ ಒಂದೇ ವಿಷಯವೇ..? ಅವು ಒಂದೇ ಆಗಿದ್ದರೆ ಏಕೆ ಒಂದೇ ಹೆಸರನ್ನು ಹೊಂದಿಲ್ಲ..? ಇವರೆಡೂ ಬೇರೆ ಎನ್ನುವುದಕ್ಕೆ ಯಾವುದೇ ಸಂಶಯ ಬೇಡ. ಮುಸ್ಲಿಂ ಹಾಗೂ ಸಿಖ್ ರನ್ನು ಸೋಲಿಸುವುದು ಹಿಂದೂ ಧರ್ಮವೇ..? ಆದರೆ ಹಿಂದುತ್ವ ಅಂದರೆ ಇದೇ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯ ಈ ಎಲ್ಲಾ ಆರೋಪಗಳ ವಿರುದ್ಧ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಸುಪ್ರೀಂ ಕೋರ್ಟ್ ಹಿಂದುತ್ವವನ್ನು ಜೀವನದ ವಿಧಾನ ಎಂದಿದೆ. ಆದರೆ ರಾಹುಲ್ ಇದನ್ನು ಹಿಂಸಾಚಾರ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
PublicNext
13/11/2021 08:28 am