ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ; ಬಿಟ್ ಕಾಯಿನ್ ಸತ್ಯ ಹೊರ ಬಂದರೆ ಸರ್ಕಾರ ಉಳಿಯುತ್ತಾ- ಸಿದ್ದರಾಮಯ್ಯ ವ್ಯಂಗ್ಯ...!

ಹುಬ್ಬಳ್ಳಿ; ಬಿಟ್ ಕಾಯಿನ್ ಸತ್ಯ ಹೊರ ಬಂದ್ರೆ ಸರ್ಕಾರ ಉಳಿಯುತ್ತಾ.? ಮುಖ್ಯಮಂತ್ರಿಗಳು ಯಾಕೆ ಅದನ್ನು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿರುವುದು..? ಮುಖ್ಯಮಂತ್ರಿಗಳು ಯಾಕೆ ಸುಳ್ಳು ಹೇಳತೀರೋದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿಗೆ ಪ್ರಶ್ನೆ ಹಾಕಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,

ಬಿಜೆಪಿಯವರು ಇದರಲ್ಲಿ ಭಾಗಿಯಾಗಿದ್ದರೇ ಅವರ ಸರ್ಕಾರ ಹೋಗಲ್ವಾ..? ಬಿಟ್ ಕಾಯಿನ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ. ಯಾವುದೇ ಪಕ್ಷದವರು ಇರಲಿ ತನಿಖೆ ಮಾಡಿ ಶಿಕ್ಷೆ ಕೊಡಿಸಿ. ಪ್ರಭಾವಿ.. ಪ್ರಭಾವಿ.. ನಾಯಕರಿದ್ದಾರೆ ಅಂತ ನನಗೆ ಗೊತ್ತು. ಮೊದಲು ಅವರು ಹೇಳಲಿ ಅಂತ ಇದೀನಿ.

ಬಿಟ್ ಕಾಯಿನ್ ನಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ತನಿಖೆಯಾಗಲಿ. ಅಪರಾಧಿಗಳಿಗೆ ರಕ್ಷಣೆ ಇರಬಾರದು, ತಪ್ಪು ಮಾಡಿದವರು ಶಿಕ್ಷೆ ಆಗಲಿ. ದಾಖಲೆ ಕೊಡಿ‌.. ದಾಖಲೆ ಕೊಡಿ. ಅಂದರೆ ಏನ್ ಅರ್ಥ..? ತನಿಖೆ ಮಾಡುವ ಸ್ಥಾನದಲ್ಲಿ ಅವರಿದ್ದಾರೆ ಎಂದರು.

ಬಿಟ್ ಕಾಯಿನ್ ವಿಚಾರ ತಲೆ ಕೆಡಿಸಿಕೊಳ್ಳಬೇಡಿ ಎಂದು ಮೋದಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಅವರು,

ಪ್ರಧಾನಮಂತ್ರಿಗಳಾದವರು ಬಿಟ್ ಕಾಯಿನ್ ವಿಚಾರ ಅಷ್ಟೊಂದು ಲಘುವಾಗಿ ಮಾತನಾಡಬಾರದು.

ಸಿಎಂ ಆಗಲಿ ಪಿಎಂ ಆಗಲಿ ಜವಾಬ್ದಾರಿಯಿಂದ ಹೇಳಬೇಕು ಸತ್ಯ ಹೊರಬರಬೇಕು ಎಂದರು.

ಬೊಮ್ಮಾಯಿ ಆಡಳಿತದ ಸರ್ಕಾರಕ್ಕೆ ನೂರು ದಿನದ ಬಗ್ಗೆ ‌ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೋದಿಯವರು ಏನ್ ಹೇಳಿದ್ದಾರೆ ಯಾರಿಗೂ ಗೊತ್ತಿಲ್ಲ. ಮುಖ್ಯಮಂತ್ರಿ ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಸಿಎಂ‌ ಹೇಳಿಕೊಂಡಿದ್ದು ಅಲ್ವಾ..? ಮೋದಿ ಎಲ್ಲಿ ಹೇಳಿದ್ದಾರೆ. ಮೋದಿಯವರು ಹೇಳಿದ್ದಾರೆ ಅಂತ ಸಿಎಂ ಹೇಳಿಕೊಂಡಿದ್ದಾರೆ. ಮೋದಿ ಆ ತರಹ ಹೇಳಿದ್ದಾರೋ ಇಲ್ವೋ..? ಯಾರಿಗೆ ಗೊತ್ತು. ಸರ್ಕಾರ ಬೀಳುತ್ತದೆ ಎಂಬ ಭಯ ಇದ್ದರು ಇರಬಹುದು ಎಂದರು.

Edited By : Nagesh Gaonkar
PublicNext

PublicNext

12/11/2021 09:43 pm

Cinque Terre

86.8 K

Cinque Terre

3

ಸಂಬಂಧಿತ ಸುದ್ದಿ