ದಾವಣಗೆರೆ: ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ಮುಖಂಡರು ಆರೋಪ ಮಾಡ್ತಾ ಇದಾರೆ.ಅ ಆರೋಪಗಳಿಗೆ ಬೇಸೀಸ್ ಇಲ್ಲ, ವಿನಾಕಾರಣ ಆರೋಪ ಮಾಡ್ತಾ ಇದಾರೆ.ವಿಚಿತ್ರ ಏನು ಅಂದ್ರೆ ಕಾಂಗ್ರೆಸ್ ಮುಖಂಡರೇ ಅದರಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಗಳು ಸ್ಪಷ್ಟವಾಗಿ ಹೇಳಿದ್ದಾರೆ ತನಿಖೆ ಆಗುತ್ತಿದೆ.ಇದರಲ್ಲಿ ಯಾರೇ ಪ್ರಭಾವಿಗಳು ಇದ್ದರು ಅವರ ಮೇಲೆ ತನಿಖೆಯಾಗುತ್ತೆ ಅವರನ್ನು ಬಿಡುವ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡರು ಬಿಜೆಪಿಯವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುವ ಮೂಲಕ ರಾಜ್ಯದ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.ಸಿಎಂ ಬದಲಾವಣೆ ವಿಚಾರಕ್ಕೆ ವಿಜಯೇಂದ್ರ ಸ್ಪಷ್ಟನೆ
ಸಿಎಂ ಬದಲಾವಣೆ ಮಾತು ಕಪೋಲ, ಕಲ್ಪಿತವಾದದ್ದು.ಚುನಾವಣೆ ಇನ್ನು ಒಂದುವರೆ ವರ್ಷಗಳ ಕಾಲ ಇದೆ.ಅಲ್ಲಿಯವರೆಗೂ ಬೊಮ್ಮಾಯಿಯವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಸಿಎಂ ಬದಲಾವಣೆ ವಿಚಾರ, ಇದೆಲ್ಲ ಕಾಂಗ್ರೆಸ್ ಪಕ್ಷದ ಪಿತೂರಿ ಅಷ್ಟೇ.ಈ ರೀತಿ ಹೇಳಿಕೆ ಕೊಡುವ ಮೂಲಕ ಆಡಳಿತವನ್ನು ಕುಂಠಿತ ಮಾಡುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ.
ದಲಿತ ಸಿಎಂ ಬಗ್ಗೆ ಕೂಡ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ಸಿಎಂ ಆಗ್ತಾರೆ ಎನ್ನುವುದು ಜನ ನಿರ್ಧಾರ ಮಾಡ್ತಾರೆ,
ಈಗ ಚುನಾವಣೆ ಇನ್ನು ಬಂದಿಲ್ಲ.ಸಿದ್ದರಾಮಯ್ಯ, ಡಿಕೆಶಿ, ಹಾಗೂ ಕಾಂಗ್ರೆಸ್ ಮುಖಂಡರ ನಡುವಿನ ಗೊಂದಲ ಇದರಲ್ಲಿ ಕಾಣಿಸುತ್ತಿದೆ.ಕಾಂಗ್ರೆಸ್ ಸಂಸ್ಕೃತಿ ಕಾಲೆಳೆಯುವುದು.ಅದು ಇದರಲ್ಲಿ ಗೊತ್ತಾಗುತ್ತಿದೆ ಎಂದರು ವಿಜಯೇಂದ್ರ.
PublicNext
11/11/2021 11:23 am