ನವದೆಹಲಿ: ಸಂಸತ್‌ನ ಉಭಯ ಸದನಗಳ ಚಳಿಗಾಲದ ಅಧಿವೇಶನವು ನವೆಂಬರ್ 29ರಿಂದ ಡಿಸೆಂಬರ್ 23ರವರೆಗೆ ಅಂದರೆ, 25 ದಿನಗಳ ಅವಧಿಗೆ ಅಧಿವೇಶನ ನಡೆಯಲಿದೆ. ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಅಧಿವೇಶನಕ್ಕೆ ಶಿಫಾರಸು ಮಾಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾರಥ್ಯದಲ್ಲಿ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಚಳಿಗಾಲದ ಅಧಿವೇಶನದ ದಿನಾಂಕ ನಿಗದಿ ಮಾಡಲಾಗಿದೆ. ಕಳೆದ ವರ್ಷ ಕೊರೊನಾ ಕಾರಣದಿಂದಾಗಿ ಚಳಿಗಾಲದ ಅಧಿವೇಶನವನ್ನೇ ರದ್ದುಗೊಳಿಸಲಾಗಿತ್ತು. ಬಳಿಕ ನಡೆದ ಬಜೆಟ್ ಅಧಿವೇಶನ ಹಾಗೂ ಮುಂಗಾರು ಅಧಿವೇಶನದೊಳಗೆ ವಿಲೀನ ಮಾಡಲಾಗಿತ್ತು.
ಲೋಕಸಭೆ ಹಾಗೂ ರಾಜ್ಯಸಭಾ ಕಲಾಪಗಳು ಒಟ್ಟೊಟ್ಟಿಗೇ ನಡೆಯಲಿದ್ದು, ಉಭಯ ಸದನಗಳ ಸದಸ್ಯರು ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಸೇರಿದಂತೆ ಎಲ್ಲಾ ರೀತಿಯ ಕೋವಿಡ್ ನಿಯಮಾವಳಿ ಪಾಲನೆ ಮಾಡಿ ಅಧಿವೇಶನದಲ್ಲಿ ಭಾಗಿಯಾಗಬೇಕೆಂದು ಮಾಹಿತಿ ನೀಡಲಾಗಿದೆ. ಲೋಕಸಭೆ ಹಾಗೂ ರಾಜ್ಯಸಭಾ ಸದಸ್ಯರು ಕಲಾಪಕ್ಕೆ ಹಾಜರಾಗುವ ಮುನ್ನ ಕೋವಿಡ್ ಪರೀಕ್ಷೆಗೆ ಒಳಗಾಗುವುದು ಕಡ್ಡಾಯವಾಗಿದೆ.
PublicNext
08/11/2021 05:55 pm