ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಯಿ ಸತ್ತರೂ ಮರುಕಪಡುವ ದೆಹಲಿ ನಾಯಕರು ರೈತರ ಸಾವುಗಳಿಗೆ ತಲೆ ಕೆಡಿಸಿಕೊಂಡಿಲ್ಲ: ಸತ್ಯಪಾಲ್ ಮಲಿಕ್

ಜೈಪುರ(ರಾಜಸ್ಥಾನ): ಒಂದು ನಾಯಿ ಸತ್ತರೂ ಮರುಕಪಡುವ ದೆಹಲಿ ನಾಯಕರು ರೈತರ ಸಾವಿನ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ಜೈಪುರದಲ್ಲಿ ನಡೆದ ಜಾಗತಿಕ ಜಾಟ್‌ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರ ಬಗ್ಗೆ ನಾನು ಏನೇ ಮಾತನಾಡಿದರೂ ಅದು ವಿವಾದದ ರೂಪ ಪಡೆಯುತ್ತಿದೆ. ನಾನು ಈ ರೀತಿ ಮಾತನಾಡುವುದನ್ನೇ ನನ್ನ ಹಿತೈಷಿಗಳು ಕಾಯುತ್ತಿರುತ್ತಾರೆ. ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲ ನೀಡುವ ಸಲುವಾಗಿ ರಾಜ್ಯಪಾಲ ಹುದ್ದೆ ತೊರೆಯಲು ಸಿದ್ಧನಿದ್ದೇನೆ ಎಂದ ಸತ್ಯಪಾಲ್, ಸೆಂಟ್ರಲ್‌ ವಿಸ್ತಾ ಯೋಜನೆಯನ್ನು ವಿರೋಧಿಸಿದ್ದಾರೆ. ನೂತನ ಸಂಸತ್‌ ಭವನ ನಿರ್ಮಿಸುವ ಬದಲು ವಿಶ್ವದರ್ಜೆಯ ಕಾಲೇಜು ನಿರ್ಮಿಸಬೇಕಿತ್ತು ಎಂದಿದ್ದಾರೆ.

Edited By : Nagaraj Tulugeri
PublicNext

PublicNext

08/11/2021 10:03 am

Cinque Terre

29.71 K

Cinque Terre

7

ಸಂಬಂಧಿತ ಸುದ್ದಿ