ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಉಪಚುನಾವಣೆ ಸೋಲಿಗೂ ಬೆಲೆ ಇಳಿಕೆಗೂ ಸಂಬಂಧವಿಲ್ಲ: ಸಚಿವ ಸುಧಾಕರ್

ಚಿಕ್ಕಬಳ್ಳಾಪುರ: ಉಪಚುನಾವಣೆಯಲ್ಲಿ ಸೋತಿದ್ದಕ್ಕೂ ತೈಲ ಬೆಲೆ ಇಳಿಕೆ ಆಗಿದ್ದಕ್ಕೂ ಸಂಬಂಧವಿಲ್ಲ. ಬೆಲೆ ಇಳಿಕೆ ಮಾಡುವ ವಿಚಾರ ಸುಮಾರು ಎರಡು ತಿಂಗಳಿನಿಂದ ಕೇಂದ್ರದ ಮುಂದಿತ್ತು. ಹೀಗಾಗಿ ಬೆಲೆ ಇಳಿಕೆ ವಿಚಾರವಾಗಿ ಕಾಂಗ್ರೆಸ್ ಮಾಡುತ್ತಿರುವ ಟೀಕೆಯಲ್ಲಿ ಅರ್ಥವಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್ ಮೇಲಿನ ಸೆಸ್ ಇದುವರೆಗೆ ಕಡಿಮೆ ಮಾಡಿಲ್ಲ ಯಾಕೆ ? ಇದು ಜನಪರ ಕಾಳಜಿನಾ? ಎಂದು ಸಚಿವ ಸುಧಾಕರ್ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ನಾಯಕರ ವಿರುದ್ಧ ತಿರುಗಿಬಿದ್ದಿದ್ದಾರೆ. 2-3 ತಿಂಗಳಿಂದಲೇ ತೈಲ ಬೆಲೆ ಇಳಿಕೆ ಕುರಿತು ಕೇಂದ್ರ ಸರ್ಕಾರ ಚಿಂತನೆ ಮಾಡಿತ್ತು. 5-6 ಉಪ‌ ಚುನಾವಣೆ ಫಲಿತಾಂಶ ಬಂದ ಕೂಡಲೇ 19-20 ರೂಪಾಯಿ ಕಡಿಮೆ‌ ಮಾಡೋಕೆ ಸಾಧ್ಯನಾ..? ತೈಲ ಬೆಲೆ ಇಳಿಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಬಾಯಿ ಬಾಯಿ ಬಡಿದುಕೊಳ್ತಿದ್ದರು.

ಯಾಕೆ ಇವತ್ತು ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ತೈಲ ಬೆಲೆ ಇಳಿಕೆ ಮಾಡಲಿಲ್ಲ? ಬರೀ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ತೈಲ ಬೆಲೆ ಇಳಿಕೆ ಮಾಡಲಾಗಿದೆ. ರಾಹುಲ್ ಗಾಂಧಿ ಈಗ ನಾಪತ್ತೆಯಾಗಿದ್ದಾರೆ. ಯಾಕೆ ಅವರು ಬೆಲೆ ಇಳಿಸುವಂತೆ ಆದೇಶ ಮಾಡೋಕೆ ಆಗೋದಿಲ್ವಾ? ಕಾಂಗ್ರೆಸ್‌ನವರು ರಾಜಕೀಯ ದುರುದ್ದೇಶಕ್ಕೆ, ಡಂಬಾಚಾರಕ್ಕೆ ರೋಡ್ ರೋಡ್ ಕಾಂಗ್ರೆಸ್ ನಾಯಕರು ಹೋಗ್ತಿದ್ದಾರೆ. ಜನಪರವಾಗಿ ನಿಜವಾಗಿಯೂ ಕೂಡ ಕಾಳಜಿ ಇಲ್ಲ ಅನ್ನೋದು ಇದಿರಂದಲೇ ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದ ಸಚಿವ ಸುಧಾಕರ್ ಕಿಡಿ ಕಾರಿದ್ದಾರೆ.

Edited By : Manjunath H D
PublicNext

PublicNext

06/11/2021 02:31 pm

Cinque Terre

41.09 K

Cinque Terre

2