ಜಮ್ಮು:ದೀಪಾವಳಿ ಹಬ್ಬದ ಪ್ರಯುಕ್ತ ಪ್ರಧಾನಿ ಮೋದಿ ಅವ್ರು ಯೋಧರನ್ನ ಉದ್ದೇಶಿಸಿ ಇವತ್ತು ಭಾಷಣ ಮಾಡಿದ್ದಾರೆ.ನಮ್ಮ ಯೋಧರ ಬಗ್ಗೆ ನಮ್ಮಗೆ ಹೆಮ್ಮೆ ಇದೆ. ದೇಶದ 130 ಕೋಟಿ ಜನರ ಹಾರೈಕೆ ನಮ್ಮ ಯೋಧರ ಮೇಲೆ ಇದೆ. ಅವರು ಇರೋದ್ರಿಂದಲೇ ನಾವು ಸುರಕ್ಷಿತವಾಗಿದ್ದೇವೆ ಎಂದು ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.
ಪ್ರಧಾನಿ ಮೋದಿ ಈಗ ಜಮ್ಮು ಪ್ರಾಂತ್ಯದ ರಜೌರಿ ಜಿಲ್ಲೆಯ ನೌಶೇರಾದಲ್ಲಿಯೇ ಇದ್ದಾರೆ. ಯೋಧರ ಜೊತೆಗೆ ದೀಪಾವಳಿ ಆಚರಿಸಲೆಂದೇ ದೆಹಲಿಯಿಂದ ಮೋದಿ ಇಲ್ಲಿಗೆ ಆಗಮಿಸಿ ಮಾತನಾಡಿದ್ದಾರೆ.
ದೇಶ ಸೇವೆ ಮಾಡೋ ನಮ್ಮ ಕುಟುಂಬದ ಜೊತೆಗೆ ನಾನು ದೀಪಾವಳಿ ಹಬ್ಬ ಆಚರಿಸೋಕೆ ಬಂದಿದ್ದೇನೆ. ದೇಶದ ರಕ್ಷಣೆ ಮಾಡೋದು ಒಂದು ಹೆಮ್ಮೆಯ ವಿಷಯ. ತಮಗೆ ಎಷ್ಟೇ ಕಷ್ಟ ಇದ್ದರೂ ಕೂಡ ಯೋಧರು ನಮ್ಮ ರಕ್ಷಣೆಗೆ ನಿಲ್ಲುತ್ತಾರೆ. ಇದು ನಮ್ಮ ದೇಶದ ಹೆಮ್ಮೆ ಯೋಧರು.
130 ಕೋಟಿ ಭಾರತೀಯರ ಹಾರೈಕೆ ನಮ್ಮ ಯೋಧರ ಮೇಲೆ ಇದೆ. ಶತ್ರುಗಳು ನಮ್ಮ ಈ ನೌಶೇರಾ ಸೆಕ್ಟರ್ ಅನ್ನ ಆಕ್ರಮಿಸಲು ಬಂದಿದ್ದರು. ದಿಟ್ಟತನದಿಂದಲೇ ಅವರನ್ನ ಹಿಮ್ಮೆಟ್ಟುವಲ್ಲಿ ನೌಶೇರಾದ ಬ್ರಿಗೇಡಿಯರ್ಸ್ ಕೆಲಸ ಮಾಡಿದ್ದಾರೆ. ಇಂತಹ ವೀರ ಯೋಧರ ನನ್ನ ಕುಟುಂಬಕ್ಕೆ ದೀಪಾವಳಿ ಹಬ್ಬದ ಹಾರ್ದಿಕ,ಹಾರ್ದಿಕ ಶುಭಾಶಯಗಳು ಎಂದು ಮೋದಿ ಎಲ್ಲರಿಗೂ ತಮ್ಮ
ಶುಭ ಹಾರೈಕೆ ತಿಳಿಸಿದ್ದಾರೆ.
PublicNext
04/11/2021 12:45 pm