ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇವತ್ತು ಹರ್ ಘರ್ ದಸ್ತಕ್ ಲಸಿಕಾ ಅಭಿಯಾನದ ಪರಿಶೀಲನಾ ಸಭೆಯನ್ನ ನಡೆಸಿದ್ದಾರೆ. ಜಾರ್ಖಂಡ್,ಮಣಿಪುರ,ನಾಗಾಲ್ಯಾಂಡ್,ಅರುಣಾಚಲ ಪ್ರದೇಶ,ಮಹಾರಾಷ್ಟ್ರ, ಮೇಘಾಲಯ ಸೇರಿದಂತೆ ಸಮರ್ಪಕವಾಗಿ ಲಸಿಕೆ ತಲುಪದೇ ಇರೋ 40 ಕ್ಕೂ ಹೆಚ್ಚು ಜಿಲ್ಲೆಗಳ ಮ್ಯಾಜಿಸ್ಟ್ರೇಟ್ ಜೊತೆಗೆ ಮೋದಿ ಅವ್ರು ವೀಡಿಯೋ ಕಾನ್ಪರೆನ್ಸ್ ಮೂಲಕ ರಿವ್ಯೂ ಮೀಟಿಂಗ್ ಮಾಡಿದ್ದಾರೆ. ಅದರ ಡಿಟೈಲ್ಸ್ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಲಸಿಕೆ ಕೊಡೋ ವಿಚಾರದಲ್ಲಿ ತುಂಬಾ ಸೀರಿಯಸ್ ಆಗಿದ್ದಾರೆ. ಈಗಾಗಲೇ ದೇಶದ 100 ಕೋಟಿ ಜನಕ್ಕೆ ಲಸಿಕೆ ಕೊಟ್ಟ ಖುಷಿಯಲ್ಲಿಯೇ ಇದ್ದಾರೆ.ಆದರೂ ದೇಶದ ಎಲ್ಲ ರಾಜ್ಯದ ಎಲ್ಲ ಜಾಗದಲ್ಲೂ ಲಸಿಕೆ ಇನ್ನೂ ತಲುಪಿಯೇ ಇಲ್ಲ. ಆ ಗುರಿ ಮುಟ್ಟಲು ಪ್ರಧಾನಿ ಮೋದಿ ಈಗ ಪರಿಶೀಲನಾ ಸಭೆ ನಡೆಸಿದ್ದಾರೆ.
ಪರಿಶೀಲಾ ಸಭೆಯಲ್ಲಿ ಮೋದಿಜ 40 ಹೆಚ್ಚು ಜಿಲ್ಲೆಯ ಮ್ಯಾಜಿಸ್ಟ್ರೇಟ್ ಗಳಿಗೆ ಹೇಳಿದ್ದು ಒಂದೇ ಮಾತು. ಹರ್ ಘರ್ ದಸ್ತಕ್ ಮಂತ್ರವನ್ನ ಅನುಸರಿಸಿ ಅಂತಲೇ ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಲಸಿಕೆ ಕೊಡಿಸಲೇಬೇಕು. ಎರಡೂ ಡೋಸ್ ಲಸಿಕೆಯನ್ನ ಕೊಡುವ ವ್ಯವಸ್ಥೆ ಆಗಲೇ ಬೇಕು ಅಂದಿರೋ ಮೋದಿ,ಆಯಾ ಜಿಲ್ಲೆಯ ಊರಿನ ಮುಖಂಡರ ಸಹಾಯ ಪಡೆದುಕೊಂಡು ಲಸಿಕೆ ಹಾಕಿಸಿ ಅಂತಲೂ ಸಲಹೆ ಕೊಟ್ಟಿದ್ದಾರೆ. ಮುಂದಿನ ವರ್ಷದ ಹೊತ್ತಿಗೆ ಅಂದುಕೊಂಡ ಗುರಿಯನ್ನ ಅತೀ ಉತ್ಸಾಹದಲ್ಲಿಯೇ ಪೂರ್ಣಗೊಳಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಉತ್ಸಾಹ ತುಂಬಿದ್ದಾರೆ.ಪರಿಶೀಲನಾ ಸಭೆ ಇನ್ನೂ ಮುಂದುವರೆದಿದೆ.
PublicNext
03/11/2021 04:00 pm