ಮುಂಬೈ: ಶಾಸಕ ರೇಣುಕಾಚಾರ್ಯ ಮುಂಬೈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಬೆಡ್ ಮೇಲೆ ಮಲಗಿರೋ ಫೋಟೋಗಳೂ ಈಗ ಟ್ವಿಟರ್ ನಲ್ಲಿ ಶೇರ್ ಆಗಿವೆ. ಏನಾಯಿತು ಅನ್ನೋ ಆಶ್ಚರ್ಯಕರ ಪ್ರಶ್ನೆಯನ್ನೂ ಎಲ್ಲರೂ ಕೇಳುವಂತೆ ಮಾಡಿದೆ. ಇಲ್ಲಿದೆ ಅದಕ್ಕೆ ಉತ್ತರ.
ರೇಣುಕಾಚಾರ್ಯರಿಗೆ ಕಳೆದ ವರ್ಷದ ವಿಧಾನಸಭೆ ಚುನಾವಣೆ ಟೈಮ್ ಅಪಘಾತ ಆಗಿತ್ತು.ಅದರಿಂದ ಕಾಲಿಗೂ ಪೆಟ್ಟು ಬಿದ್ದಿತ್ತು. ಕೆಲವು ತಿಂಗಳಿನಿಂದ ನೋವು ಕೂಡ ಕಾಣಿಸಿಕೊಂಡಿತ್ತು. ವೈದ್ಯರ ಸಲಹೆ ಮೇರೆಗೆ ರೇಣುಕಾಚಾರ್ಯ ಈಗ ಮುಂಬೈ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ. ಅದೇ ವೈದ್ಯರ ಸಲಹೆ ಮೇರೆಗೆ ಮುಂದಿನ 15 ದಿನ ಬೆಂಗಳೂರಿನ ಆಯುರ್ವೇದಿಕ ಆಸ್ಪತ್ರೆಯಲ್ಲೂ ದಾಖಲಾಗಲಿದ್ದಾರೆ. ಹಾಗಂತ ತಮ್ಮ ಕೆಲಸಗಳನ್ನ ಸ್ಪಾಪ್ ಮಾಡಿಯೇ ಇಲ್ಲ ರೇಣುಕಾಚಾರ್ಯ. ಜನರ ಅಹವಾಲುಗಳನ್ನ ಸ್ವೀಕರಿಸಲು ಆಪ್ತ ಸಹಾಯಕರಿಗೂ ಸೂಚಿಸಿದ್ದಾರೆ. ಜನರಲ್ಲಿ ಸಹಕರಿಸಿ ಅಂತಲೂ ಕೇಳಿಕೊಂಡಿದ್ದಾರೆ.
PublicNext
27/10/2021 07:29 pm