ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಸಿದ್ಧರಾಮಯ್ಯ ಜೆಡಿಎಫ್ ಟೀಕೆ: ನಿಖಿಲ್ ಕೊಟ್ಟರು ಟಾಂಗ್

ಮಂಡ್ಯ: ಮಾಜಿ ಸಿಎಂ ಸಿದ್ಧರಾಮಯ್ಯನವರ ಜೆಡಿಎಫ್ ಅಂತ ಇತ್ತೀಚಿಗೆ ಜೆಡಿಎಸ್ ಪಕ್ಷವನ್ನ ಟೀಕಿಸಿದ್ದರು. ಅಂದರೆ ಜೆಡಿಎಸ್ ಪಕ್ಷ ಗೌಡರ ಫ್ಯಾಮಿಲಿ ಪಕ್ಷ. ಇದು ಜೆಡಿಎಸ್ ಅಲ್ಲ ಜೆಡಿಎಫ್ ಅಂತಲೇ ಹೇಳಿದ್ದರು. ಇದಕ್ಕೆ ಪ್ರತಿಯಾಗಿಯೇ ಇಂದು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಯಲ್ಲಿ ಮಾತನಾಡಿರೋ ನಿಖಿಲ್, ಸಿದ್ಧರಾಮಯ್ಯನವರು ಜೆಡಿಎಸ್ ಅನ್ನ ಜೆಡಿಎಫ್ ಅಂತಲೇ ಕರೆದಿದ್ದಾರೆ. ಹಾಗಾದ್ರೆ ಸಿದ್ಧರಾಮಯ್ಯನವರ ಮಗ ವೃತ್ತಿಯಲ್ಲಿ ಡಾಕ್ಟರ್. ಆದರೂ ಅವರು ಯಾಕೆ ರಾಜಕೀಯಕ್ಕೆ ಬಂದರು ಅಂತಲೇ ಕೇಳಿದ್ದಾರೆ ನಿಖಿಲ್. ಜಮೀರ್ ಅಹ್ಮದ್ ಅವರು ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಜನತೆನೆ ಅವರಿಗೆ ಉತ್ತರ ಕೊಡುತ್ತಾರೆ ಎಂದು ಜಮೀರ್ ಟೀಕೆಗೂ ಉತ್ತರಿಸಿದ್ದಾರೆ ನಿಖಿಲ್. ಚುನಾವಣೆ ಸ್ಪರ್ಧಿಸೋ ವಿಚಾರಕ್ಕೆ ಸಂಬಂಧಿಸಿದಂತೆ, ನಿಖಿಲ್ ಸದ್ಯಕ್ಕೆ ಅದರ ಬಗ್ಗೆ ಏನೂ ಹೇಳೋದಿಲ್ಲ. ಮುಂದಿನ ಚುನಾವಣೆಯಲ್ಲಿ ಪಕ್ಷದ ಯೋಜನೆಗಳನ್ನ ಜನರಿಗೆ ಮನವರಿಕೆ ಮಾಡಿಕೊಡೋದೇ ಆಗಿದೆ. ಸದ್ಯ ಅದರ ಬಗ್ಗೆ ಮಾತನಾಡೋದಿಲ್ಲ ಅಂದಿದ್ದಾರೆ ನಿಖಿಲ್.

Edited By : Manjunath H D
PublicNext

PublicNext

27/10/2021 04:20 pm

Cinque Terre

80.27 K

Cinque Terre

4

ಸಂಬಂಧಿತ ಸುದ್ದಿ