ವಿಜಯಪುರ: ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶತಾಯು-ಗತಾಯ ಪ್ರಯತ್ನ ನಡೆದಿದೆ. ಇಂದು ಕೂಡ ಕೈ ಅಭ್ಯರ್ಥಿ ಪರ ಪ್ರಚಾರ ಮಾಡಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ಬೆಲೆಏರಿಕೆಯಿಂದ ತತ್ತರಿಸಿದ ಜನ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಅಧಿಕಾರಕ್ಕಾಗಿ ಯಾರೊಂದಿಗಾದರೂ ಹೊಂದಾಣಿಕೆ ಮಾಡಿಕೊಳ್ಳುವ ಬಿಜೆಪಿಯವರು ಹಣ ಹಂಚಿ ಗೆಲ್ಲಲು ಯತ್ನಿಸುತ್ತಿದ್ದಾರೆ. ತಾವು ಲೂಟಿ ಹೊಡೆದ ಹಣ ತಂದು ಉಪಚುನಾವಣೆ ಕ್ಷೇತ್ರಗಳಲ್ಲಿ ಹಂಚುತ್ತಿದ್ದಾರೆ. ಆದ್ರೆ ಮತದಾರರು ಪ್ರಬುದ್ಧರಾಗಬೇಕು. ಬಿಜೆಪಿಯವರು ಹಣ ಹಂಚಿದರೆ ಸ್ವೀಕರಿಸಬೇಡಿ. ಒಂದು ವೇಳೆ ಸ್ವೀಕರಿಸಿದರೂ ವೋಟ್ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರಿಗೆ ಹಾಕಿ ಎಂದು ಸಿದ್ದರಾಮಯ್ಯ ಮತದಾರರಿಗೆ ಮನವಿ ಮಾಡಿದ್ದಾರೆ.
PublicNext
26/10/2021 10:56 pm