ಅಗರ್ತಲಾ:ಬಿಜೆಪಿಯ ಪಶ್ಚಿಮ ಬಂಗಾಳದ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಅವರ ಪೋಟೋವನ್ನ ಪಗ್ ನಾಯಿ ಪೋಟೋ ಜೊತೆಗೆ ಕೋಲಾಜ್ ಮಾಡಿ, ತ್ರಿಪುರಾದ ಮಾಜಿ ಗವರ್ನರ್ ತಥಾಗತ್ ರಾಯ್ ಟ್ವೀಟ್ ಮಾಡಿದ್ದಾರೆ. ಈಗ ಅದು ವಿವಾದಕ್ಕೆ ಕಾರಣವೂ ಆಗಿದೆ. ಹೆಚ್ಚು ಚರ್ಚೆಗೂ ಗ್ರಾಸವಾಗಿದೆ.
ಆದರೆ, ಥತಾಗತ್ ಅವರು ಹೀಗೆ ಟ್ವಿಟರ್ ಮಾಡಲು ಕಾರಣವೂ ಇದೆ. ಹೌದು. ಕೈಲಾಶ್ ವಿಜಯವರ್ಗಿಯಾ ಚುನಾವಣೆಯಲ್ಲಿ ಸೋತಿದ್ದಾರೆ. ಆದರೂ ಬಿಜೆಪಿಯ ಉಸ್ತುವಾರಿಯಾಗಿದ್ದಾರೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿ ಕೇಳಿದ್ದರು.ಆ ಟ್ವಿಟ್ ಗೆ ತಥಾಗತ್ ರಾಯ್ ರಿಯಾಕ್ಟ್ ಮಾಡಿದ್ದಾರೆ. ಪಗ್ ನಾಯಿ ಫೋಟೋ ಜತೆಗೆ ಕೈಲಾಶ್ ವಿಜಯವರ್ಗಿಯಾ ಫೋಟೋ ಕೋಲಾಜ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
PublicNext
26/10/2021 01:07 pm