ಹಾನಗಲ್: ಹಾನಗಲ್ ಉಪಚುನಾವಣೆ ಪ್ರಚಾರದ ನಡುವೆ ಸಿಎಂ ಬೊಮ್ಮಾಯಿ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಸಜ್ಜಕದ ಹೋಳಿಗೆ ಊಟ ಮಾಡಿದ್ದಾರೆ. ಸಚಿವ ಶಿವರಾಮ್ ಹೆಬ್ಬಾರ್, ಶಾಸಕ ಅಮೃತ ದೇಸಾಯಿ ಹಾಗೂ ಇತರ ನಾಯಕರು ಇದೇ ವೇಳೆ ಸಿಎಂ ಜೊತೆ ಪಂಕ್ತಿಯಲ್ಲಿ ಕುಳಿತು ಸವಿಭೋಜನ ಸವಿದಿದ್ದಾರೆ.
ಹಾನಗಲ್ ತಾಲೂಕಿನ ಬೈಚುವಳ್ಳಿ ಗ್ರಾಮದ ಜಗದೀಶ್ ಕೋಟೆ ಎಂಬುವವರ ಮನೆಯಲ್ಲಿ ಸಿಎಂ ಬೊಮ್ಮಾಯಿ ಸೇರಿದಂತೆ ಇತರ ನಾಯಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಉತ್ತರ ಕರ್ನಾಟಕದ ವಿಶೇಷ ಸಜ್ಜಕದ ಹೋಳಿಗೆ ಹಾಗೂ ಪಲ್ಯ, ಚಟ್ನಿ, ಮೊಸರು ಸವಿದ ಸಿಎಂ ಬೊಮ್ಮಾಯಿ, ಎರಡು ಬಾರಿ ಹೋಳಿಗೆ ಹಾಗೂ ದೇಶೀ ತುಪ್ಪ ಕೇಳಿ ಪಡೆದಿದ್ದಾರೆ. ಊಟದ ನಂತರ ಸಿಎಂ ನೇತೃತ್ವದ ತಂಡ ಬೈಚುವಳ್ಳಿ ಹಾಗೂ ಕರಗುದರಿ ಗ್ರಾಮದಲ್ಲಿ ಪ್ರಚಾರ ಮಾಡಲು ತೆರಳಿತು.
PublicNext
25/10/2021 04:09 pm