ಜಮ್ಮು-ಕಾಶ್ಮೀರ:ಕೇಂದ್ರ ಗೃಹ ಸಚಿವ ಅಮಿತ್ ಶಾ ಸದ್ಯ ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿಯೇ ಇದ್ದಾರೆ. ಇಲ್ಲಿಯ ಸಾಮಾನ್ಯ ಜನರ ಜೊತೆಗೂ ಬೆರೆತು ಅವರ ಕಷ್ಟ-ನಷ್ಟಗಳನ್ನ ಕೇಳುತ್ತಿದ್ದಾರೆ. ಹಾಗೇನಾದ್ರೂ ಅವರಿಗೆ ಕಷ್ಟಗಳಿದ್ದರೇ, ನೇರವಾಗಿ ಅವರು ಅಮಿತ್ ಶಾ ರನ್ನ ಸಂಪರ್ಕಿಸಬಹುದು. ಹಾಗಂತ ನಾವು ಹೇಳ್ತಿಲ್ಲ. ಸ್ವತ: ಅಮಿತ್ ಶಾ ಅದನ್ನ ಹೇಳಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಜಮ್ಮುವಿನ ಗಡಿಭಾಗದಲ್ಲಿರೋ ಮಕ್ವಾಲ್ ಗ್ರಾಮದ ವ್ಯಕ್ತಿಯ ಪೋನ್ ನಂಬರ್ ಪಡೆದಿದ್ದಾರೆ. ತಮ್ಮ ಫೋನ್ ನಂಬರ್ ಅನ್ನೂ ಅವರಿಗೆ ಕೊಟ್ಟು, ಏನೇ ಸಮಸ್ಯೆ ಆದರೂ ನನ್ನ ಸಂಪರ್ಕಿಸು ಅಂತಲೇ ಹೇಳಿ ಬಂದಿದ್ದಾರೆ ಅಮಿತ್ ಶಾ.
PublicNext
24/10/2021 09:40 pm