ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಜೆಡಿಎಸ್‌ನವರು ದುಡ್ಡು ಕೊಡ್ತೀವಿ ಬನ್ನಿ ಎಂದು ಕರೆದು ಕೈ ಕೊಟ್ಟರು: ಮಹಿಳೆಯರಿಂದ ಗಲಾಟೆ

ವಿಜಯಪುರ: ಜೆಡಿಎಸ್ ಪಕ್ಷ ಜನರಿಗೆ ಹಣ ಕೊಟ್ಟು ಪ್ರಚಾರ ಮಾಡಲು ಕರೆ ತಂದಿದೆ ಎಂಬ ಆರೋಪ ಕೇಳಿ ಬಂದಿದೆ. ಅದಕ್ಕೆ ಸಾಕ್ಷಿ ಎಂಬಂತೆ ನಾಲ್ಕೈದು ಮಹಿಳೆಯರು ನಮ್ಮನ್ನು ಪ್ರಚಾರಕ್ಕೆ ಕರೆದು ನಂತರ ಹಣ ಕೊಟ್ಟಿಲ್ಲ ಎಂದು ಹೇಳುತ್ತಿರುವ ವಿಡಿಯೋ ಮಾಧ್ಯಮಗಳಿಗೆ ದೊರೆತಿದೆ.

ಇಂದು ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದಿಂದ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಎಚ್.ಡಿ ರೇವಣ್ಣ ನೇತೃತ್ವದಲ್ಲಿ ನಡೆದ ಈ ಸಮಾವೇಶಕ್ಕೆ ದುಡ್ಡು ಕೊಟ್ಟು ಜನರನ್ನು ಕರೆತರಲಾಗಿದೆ ಎನ್ನಲಾಗಿದೆ. ಸಂಘಟಕರು ಒಬ್ಬರಿಗೆ 200ರಿಂದ 250 ರೂ. ಹಣ ಕೊಡೋದಾಗಿ ಹೇಳಿದ್ದರಂತೆ. ಬಂದ ಜನರಲ್ಲಿ ಕೆಲವರಿಗೆ ಮೊದಲೇ ಹೇಳಿದಂತೆ ಹಣ ಕೊಟ್ಟಿದ್ದಾರೆ. ಆದ್ರೆ ನಮಗೆ ಮಾತ್ರ ಹಣ ಕೊಟ್ಟಿಲ್ಲ ಎಂದು ಆರೋಪಿಸಿದ ಮಹಿಳೆಯರು ಸಂಘಟಕರೊಂಗೆ ಗಲಾಟೆ ಮಾಡಿದ್ದಾರೆ.

Edited By : Shivu K
PublicNext

PublicNext

24/10/2021 09:07 pm

Cinque Terre

138.59 K

Cinque Terre

7