ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ಯಪಾನ, ಡ್ರಗ್ಸ್‌ನಿಂದ ದೂರ: ಕಾಂಗ್ರೆಸ್ ಸದಸ್ಯತ್ವ ಬೇಕಾದ್ರೆ ಷರತ್ತು ಅನ್ವಯ

ನವದೆಹಲಿ: ಹೊಸದಾಗಿ ಕಾಂಗ್ರೆಸ್ ಸದಸ್ಯತ್ವ ಪಡೆಯುವವರಿಗೆ ಪಕ್ಷವು ಕೆಲವು ಷರತ್ತುಗಳನ್ನು ವಿಧಿಸಿದೆ. ಅದರಂತೆ ಪ್ರಾಥಮಿಕ ಸದಸ್ಯತ್ವ ಪಡೆಯುವವರು ಮದ್ಯಪಾನ, ಡ್ರಗ್ಸ್‌ನಿಂದ ದೂರವಿರುವುದಾಗಿಯೂ ಬಹಿರಂಗ ವೇದಿಕೆಗಳಲ್ಲಿ ಪಕ್ಷವನ್ನು ಟೀಕಿಸುವುದಿಲ್ಲವೆಂದೂ ಘೋಷಿಸಿಕೊಳ್ಳಬೇಕಾಗುತ್ತದೆ.

ಕಾಂಗ್ರೆಸ್ ನವೆಂಬರ್ 1ರಿಂದ ಆರಂಭವಾಗಲಿರುವ ಸದಸ್ಯತ್ವ ಅಭಿಯಾನ ಮುಂದಿನ ವರ್ಷ ಮಾರ್ಚ್‌ ವರೆಗೆ ಮುಂದುವರಿಯಲಿದೆ. ಹೊಸ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆಯು ಮುಂದಿನ ವರ್ಷ ಆಗಸ್ಟ್ 21ರಿಂದ ಸೆಪ್ಟೆಂಬರ್ 20ರ ಒಳಗಾಗಿ ನಡೆಯಲಿದೆ ಎಂಬುದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ವೇಳಾಪಟ್ಟಿಯಿಂದ ತಿಳಿದುಬಂದಿದೆ.

ಹೊಸ ಸದಸ್ಯತ್ವದ ಫಾರಂನಲ್ಲಿ ಪಕ್ಷ ಸೇರಲು ಬಯಸುವವರು ದೇಶದ ಕಾನೂನು ಮೀರಿ ಯಾವುದೇ ಸ್ವತ್ತು ಹೊಂದಿಲ್ಲ ಮತ್ತು ಪಕ್ಷ ಸೂಚಿಸಿದ ಯಾವುದೇ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಳ್ಳುವುದಾಗಿ ಒಪ್ಪಿಕೊಳ್ಳಬೇಕು ಎಂಬ ಅಂಶಗಳಿವೆ.

ಷರತ್ತುಗಳೇನು?

* ನಾನು ಪ್ರಾಮಾಣೀಕರಿಸಿದ ಖಾದಿ ಬಟ್ಟೆಯನ್ನು ತೊಡುವ ಅಭ್ಯಾಸ ಇರುವವನು.

* ನನಗೆ ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯ ಚಟಗಳಿಲ್ಲ.

* ನಾನು ಸಾಮಾಜಿಕ ಅಸಮಾನತೆಯನ್ನೂ ನಂಬಲ್ಲ ಮತ್ತು ಪಾಲಿಸಲ್ಲ.

* ಜಾತಿ, ಧರ್ಮ ಎಂಬ ಬೇಧವಿಲ್ಲದೆ ಸಾಮಾಜಿಕ ಏಕತೆಯಲ್ಲಿ ನಂಬಿಕೆ ಇದೆ.

* ಕಾನೂನು ಮೀರಿ ನಾನು ಹೆಚ್ಚಿನ ಆಸ್ತಿಯನ್ನು ಹೊಂದಿಲ್ಲ.

* ಕಾರ್ಯಕಾರಿ ಸಮಿತಿ ನಿರ್ಧರಿಸಿದ ಯಾವುದೇ ಕೆಲಸಕ್ಕೂ ನಾನು ಸಿದ್ಧ.

Edited By : Vijay Kumar
PublicNext

PublicNext

24/10/2021 11:24 am

Cinque Terre

22.03 K

Cinque Terre

3

ಸಂಬಂಧಿತ ಸುದ್ದಿ