ಪ್ರಿಯಾಂಕಾ ಗಾಂಧಿ ವಾದ್ರಾ ಸದಾ ಸುದ್ದಿಯಲ್ಲಿಯೇ ಇರುತ್ತಾರೆ. ಲಖೀಂಪುರ ರೈತರ ಘಟನೆ ಬಳಿಕ ಈಗ ಉತ್ತರ ಪ್ರದೇಶ ಮುಂದಿನ ಚುನಾವಣೆ ಕಡೆ ವಾಲಿದಂತಿದೆ. ಹೆಚ್ಚಾಗಿ ಎಲ್ಲೆಡೆ ಪ್ರಿಯಾಂಕಾ ಈಗ ಇದರ ಬಗ್ಗೇನೆ ಮಾತನಾಡುತ್ತಿದ್ದಾರೆ.ವಿಶೇಷ ಅಂದ್ರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹೆಚ್ಚಿನ ಸಂಖ್ಯೆಯಲ್ಲಿಯೇ ಮಹಿಳೆಯಿರಿಗೆ ಟಿಕೆಟ್ ನೀಡಲಾಗುವುದು ಅಂತಲೇ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಸದ್ಯ ಎಲೆಕ್ಷನ್ ತಯಾರಿ ಅಲ್ಲಿಯೆ ಇದ್ದಂತಿದೆ.ಉತ್ತರ ಪ್ರದೇಶದ ಮುಂದಿನ ಚುನಾವಣೆಯಲ್ಲಿ
ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಕೊಡಲಿದೆ. ಶೇಕಡ 40 ರಷ್ಟು ಮಹಿಳೆಯರಿಗೇನೆ ಟಿಕೆಟ್ ನೀಡಲಾಗುವುದು ಎಂದಿರೋ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶದಲ್ಲಿ ಮಹಿಳೆಯರೇ ಅಧಿಕಾರಕ್ಕೆ ಬರಬೇಕು ಅನ್ನೊ ಅರ್ಥದಲ್ಲಿಯೇ ಈಗ ಹೇಳಿಕೆ ಕೊಡುತ್ತಿದ್ದಾರೆ.
PublicNext
23/10/2021 12:07 pm