ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಆಶ್ವಾಸನೆಗಳನ್ನೆ ಅಸ್ತ್ರವಾಗಿಟ್ಟುಕೊಂಡು ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಉಪ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅದರಂತೆ ಪ್ರಚಾರದ ವೇಳೆ ಭರ್ಜರಿ ಭಾಷಣ ಮಾಡಿದ ಡಿಕೆಶಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ್ರೆ, ರೈತರ ಆದಾಯ ಡಬಲ್ ಮಾಡೋದಾಗಿ ಹೇಳಿತ್ತು. ಅದು ಆಗಿದಿಯೇ ಅಂತಲೇ ಪ್ರಶ್ನಿಸಿದ್ದಾರೆ ಡಿಕೆ ಶಿವಕುಮಾರ್.
ಡಬಲ್ ಇಂಜಿನ್ ಸರ್ಕಾರ ಬಂದಿದೆ.ರಾಜ್ಯದಲ್ಲೂ ಬಿಜೆಪಿ ಇದೆ. ಕೇಂದ್ರದಲ್ಲೂ ಬಿಜೆಪಿ ಇದೆ. ಇದರಿಂದ ರೈತರ ಆದಾಯ ಡಬಲ್ ಅಂತೂ ಆಗಿಯೇ ಇಲ್ಲ. ರೈತರ ಹೋಗಲಿ, ಕೋರೋನಾ ಸಮಯದಲ್ಲಿ ಬಿಜೆಪಿ ಸರ್ಕಾರವಾಗಲಿ,ಸಚಿವರಾಗಲಿ, ನಿಮ್ಮ ಸಹಾಯಕ್ಕೆ ಬಂದರೇ ? ಸರ್ಕಾರ ಘೋಷಿಸಿರೋ ಪರಿಹಾರವನ್ನ ನಿಮ್ಮ ಖಾತೆಗೆ ಜಮೆ ಮಾಡಿದರೇ ಅಂತಲೇ ಪ್ರಶ್ನೆಗಳ ಸುರಿ ಮಳೆಯನ್ನೇ ಗೈದಿದ್ದಾರೆ ಡಿಕೆಶಿ. ಡಿಕೆಶಿ ಅವ್ರ ಈ ಭರ್ಜರಿ ಭಾಷಣದ ವೀಡಿಯೋ ತುಣುಕನ್ನ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಪೇಜ್ ಅಲ್ಲೂ ಶೇರ್ ಮಾಡಲಾಗಿದೆ.
PublicNext
23/10/2021 11:19 am