ದೆಹಲಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿನಿಂದ ಮೂರು ದಿನ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ. ಮೂರು ದಿನವೂ ಅಲ್ಲಿಯೆ ಪ್ರವಾಸ ಮಾಡಿ,ವಿವಿಧ ಕಾರ್ಯಕ್ರಮಗಳಲ್ಲೂ ಭಾಗಿಯಾಗಲಿದ್ದಾರೆ ಅಮಿತ್ ಶಾ.
ಜಮ್ಮು-ಕಾಶ್ಮೀರವನ್ನ ಮತ್ತು ಲಡಾಕ್ ಅನ್ನ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ ಬಳಿಕ ಇದೇ ಮೊದಲ ಬಾರಿಗೆ ಗೃಹ ಸಚಿವ ಅಮಿತ್ ಶಾ ಜಮ್ಮು-ಕಾಶ್ಮೀರಕ್ಕೆ ಬರುತ್ತಿದ್ದಾರೆ. ಇಲ್ಲಿಯ ಮೂರು ದಿನದ ಪ್ರವಾಸದಲ್ಲಿ ಸಾರ್ವಜನಿಕ ರ್ಯಾಲಿ ನಡೆಸಲಿದ್ದಾರೆ. ಶ್ರೀನಗರ ಮತ್ತು ಶರ್ಜಾಹ್ ಮೊದಲ ನೇರ ವಿಮಾನ ಸಂಚಾರಕ್ಕೆ ಚಾಲನೆ ಕೊಡಲಿದ್ದಾರೆ.
ಜಮ್ಮುವಿನ ಐಟಿ ಬ್ಲಾಕ್ ಅನ್ನ ಉದ್ಘಾಟಿಸಲಿದ್ದಾರೆ. ಉಧಾಂಪುರ ಮತ್ತು ಹಂದ್ವಾರದಲ್ಲಿಯ 2 ವೈದ್ಯಕೀಯ ಕಾಲೇಜುಗಳ ಉದ್ಘಾಟನೆಗೆ ಅಡಿಗಲ್ಲು ಸ್ಥಾಪಿಸಲಿದ್ದಾರೆ.ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯನ್ನೂ ನಡೆಸಲಿದ್ದಾರೆ. ಒಟ್ಟು ವಿವಿಧ ಉದ್ದೇಶದಿಂದಲೇ ಅಮಿತ್ ಶಾ ಮೂರು ದಿನ ಇಲ್ಲಿಯೇ ಇರಲಿದ್ದಾರೆ.
PublicNext
23/10/2021 09:29 am