ಹಾನಗಲ್ : ಬೈ ಎಲೆಕ್ಷನ್ ಕಣದಲ್ಲಿ ಮತಯಾಚನೆ ಬಲು ಜೋರಾಗಿಯೇ ನಡೆದಿದೆ. ರಾಜಕೀಯ ಘಟಾನುಘಟಿಗಳು ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುವಲ್ಲಿ ಬ್ಯುಜಿಯಾಗಿದ್ದಾರೆ.
ಇಂದು ಹಾನಗಲ್ ಮತ ಕ್ಷೇತ್ರದಲ್ಲಿ ಮತಯಾಚನೆಗೆ ಅಖಾಡಕ್ಕೆ ಇಳಿದ ಮಾಜಿ ಸಿಎಂ ಬಿಎಸ್ ವೈ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಾತಿ ವಿಷ ಭಿತ್ತಿ ಚುನಾವಣೆ ಗೆಲ್ಲುವಂತ ಪ್ರವೃತ್ತಿ ನಮ್ಮ ದೇಶದಲ್ಲಿ ಶುರುವಾಗಿತ್ತು. ಯಾವಾಗ ಮೋದಿ ಜೀ ಆಡಳಿತಕ್ಕೇ ಬಂದರೋ ಅಲ್ಲಿಗೆ ಕಾಂಗ್ರೆಸ್ ಪಕ್ಷ ದೂಳಿಪಟ ಆಗಿದೆ ಎಂದರು.
ಸದ್ಯ ಕಾಂಗ್ರೆಸ್ ನವರು ಅವರ ನಾಯಕರು ಯಾರು ಅಂತ ಅವರೆ ಹುಡುಕುವ ದುಸ್ಥಿತಿಗೆ ಬಂದಿದ್ದಾರೆ. ಹಾನಗಲ್ ಕೌಂಟಿಂಗ್ ಆರಂಭವಾದ ಒಂದು ಗಂಟೆಯಲ್ಲಿ ಕಾಂಗ್ರೆಸ್ ಜನರು ಖಾಲಿ ಆಗಬೇಕು. ಬಸವರಾಜ ಬೊಮ್ಮಾಯಿ ಹೇಳಿದಂತೆ 25 ಸಾವಿರ ಅಂತರದಿಂದ ಗೆಲವು ಸಾಧಿಸಬೇಕು. ಹಾವೇರಿ ಜಿಲ್ಲೆಯನ್ನು ಮಾದರಿ ಜಿಲ್ಲೆ ಮಾಡಬೇಕು ಎಂದು ಅಪೇಕ್ಷೆ ಪಟ್ಟ ಉದಾಸಿ ಅವರ ಕನಸು ನನಸಾಗಬೇಕು ಎಂದರು.
ಉದಾಸಿಯವ ಅನುಪಸ್ಥಿತಿಯಲ್ಲಿ ಹಾವೇರಿ ಅಭಿವೃದ್ಧಿ ಮಾಡುತ್ತೇವೆ. ನೀರಾವರಿ, ಶಿಕ್ಷಣ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಒತ್ತು ನೀಡಿದ ಉದಾಸಿ ಅವರಿಗೆ ಜಿಲ್ಲೆಯಷ್ಟೇ ಅಲ್ಲ, ರಾಜ್ಯದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಸಾಮಾನ್ಯ ಜನರು ಗೌರವದಿಂದ ಬದುಕಬೇಕು, ಅದನ್ನು ನಾವು ಮಾಡಿ ತೋರಿಸುತ್ತೇವೆ. ಪ್ರತಿ ಮನೆಮನೆಗೆ ಬಿಜೆಪಿ ಸರ್ಕಾರ ಸವಲತ್ತು ಕೊಟ್ಟಿದೆ.ಬೇಕಿದ್ದರೆ ಪರಿಶೀಲನೆ ಮಾಡಿ ಎಂದರು.
ಇಡೀ ಪ್ರಪಂಚ ಮೋದಿ ಅವರನ್ನು ಹಾಡಿ ಹೋಗಳುತ್ತಿದೆ. ಆದ್ರೆ ಕಾಂಗ್ರೆಸ್ ನಾಯಕರುಗಳು ಹಗುರವಾಗಿ ಮಾತನಾಡುತ್ತಾರೆ. ಕಾಂಗ್ರೆಸ್ ನವರಿಗೆ ಮುಂದಿನ ದಿನಗಳಲ್ಲಿ ಜನರು ಪಾಠ ಕಲಿಸುತ್ತಾರೆ. ಗೋಣಿ ಚೀಲದಲಿ ದುಡ್ಡು ತೆಗೆದುಕೊಂಡು ಬಂದಿದ್ದಾರೆ ಎಂದು ಅಪಪ್ರಚಾರ ಮಾಡಿ ಮತ ಕೇಳಬೇಡಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಸಜ್ಜನರಗೆ ಮತ ನೀಡಿ ಎಂದರು.
PublicNext
22/10/2021 08:51 pm