ವಿಜಯಪುರ : ಕಾಂಗ್ರೆಸ್ ಒಂದು ಮುಳುಗುತ್ತಿರುವ ಹಡುಗು ಈ ದೋಣಿಯಲ್ಲಿ ಪ್ರಯಾಣಿಸುವವರು ಮುಳುಗುವುದು ಖಚಿತ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಒಂದೆರಡು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿರುವ ಕಾಂಗ್ರೆಸ್ , ಅಲ್ಲಿ ಕೂಡಾ ಅಧಿಕಾರ ಕಳೆದುಕೊಳ್ಳಲಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆದ ಫೈಟ್ ನಿಂದಾಗಿ ಶೀಘ್ರವೇ ಕಾಂಗ್ರೆಸ್ ಸಂಪೂರ್ಣವಾಗಿ ಮುಳುಗಿ ಹೋಗುತ್ತದೆ ಎಂದಿದ್ದಾರೆ.
ಐದು ವರ್ಷ ಮುಖ್ಯ ಮಂತ್ರಿ ಆದ ಸಿದ್ದರಾಮಯ್ಯ ತಾವೇ ಸೋಲನ್ನು ಅನುಭವಿಸಿದರು. 2023 ಹಾಗೂ 2024 ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಇದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರಿಗೂ ಗೊತ್ತು ಹಾಗಾಗಿ ಅವರಲ್ಲಿ ಬಿಜೆಪಿ ಕಂಡು ಭಯ ಇದೆ.
ಇನ್ನು ಸೋಲನ್ನು ಸಮರ್ಥಿಸಿಕೊಳ್ಳಲು ಬಿಜೆಪಿಯವರು ಹಣ ಹಂಚುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಹಣ, ಹೆಂಡ ಹಂಚುವಂತದ್ದು ಕಾಂಗ್ರೆಸ್ ನವರು. ಹಣ ಹಂಚುವದು ಗಮನಕ್ಕೆ ಬಂದರೆ ಚುನಾವಣಾ ಆಯೋಗಕ್ಕೆ ಕಂಪ್ಲೇಟ್ ಮಾಡಿ.
ಇನ್ನು ಅಲ್ಪಸಂಖ್ಯಾತರ ಒಲವು ಬಿಜೆಪಿಯತ್ತ ಹೆಚ್ಚಾಗಿದೆ. ನಡೆಯುತ್ತಿರುವ ಎರಡು ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಎರಡು ಬಿಜೆಪಿ ಅಭ್ಯರ್ಥಿಗಳ ಗೆಲವು ಖಚಿತ ಎಂದ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
PublicNext
22/10/2021 08:45 pm