ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜನರ ಮನಸ್ಸು ಗೆಲ್ಲಬೇಕು ಹೊರತು ಇನ್ನೊಬ್ಬರನ್ನು ನಿಂದಿಸುವ ಕೆಲಸ ಮಾಡಬಾರದು! ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಚುನಾವಣೆ ಜನರ ಧ್ವನಿಯಾಗಿದೆ. ಜನರ ಹಾಗೂ ಕ್ಷೇತ್ರದ ಅಭಿವೃಧ್ದಿಗೆ ಸೀಮಿತರಾದರೆ ಜನಪ್ರತಿನಿಧಿಗಳಿಗೆ ಒಳ್ಳೆಯದು. ಜನರ ಮನಸ್ಸು ಗೆಲ್ಲುವ ಮಾತಗಳನ್ನಾಡಬೇಕೆ ಹೊರತು ಇನ್ನೊಬ್ಬರನ್ನು ನಿಂದಿಸುವ ಕೆಲಸ ಮಾಡಬಾರದು ಎಂದು, ಉಪಚುನಾವಣೆ ಪ್ರಚಾರದಲ್ಲಿ ವೈಯಕ್ತಿಕ ನಿಂದನೆಗಳೇ ಹೆಚ್ಚಾಗುತ್ತಿವೆಯಲ್ಲ ಎನ್ನುವ ಪ್ರಶ್ನೆಗೆಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೀಗೆ ಪ್ರತಿಕ್ರಿಯೆ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ‌ಮಾತನಾಡಿದ‌ ಅವರು, ಇನ್ನು, ಸುರಕ್ಷತೆ ದೃಷ್ಟಿಯಿಂದ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಯುವತಿಯರಿಗೆ ಸ್ವಯಂ ರಕ್ಷಣಾ ತರಬೇತಿ ನೀಡಲಾಗುವುದು. ಸ್ವಯಂ ಸುರಕ್ಷತೆಗೆ ತರಬೇತಿ ನೀಡುವ ಕೆಲಸವನ್ನು ಕೆಎಸ್ ಆರ್ ಪಿಗೆ ವಹಿಸಲಾಗುವುದು. ಪೊಲೀಸ್ ತರಬೇತಿ ಶಾಲೆಗಳಲ್ಲಿ ಕೆಲಸ ಮಾಡಿದ ನಿವೃತ್ತ ಪ್ರಾಂಶುಪಾಲರನ್ನು ತರಬೇತಿ‌ ನೀಡಲು ಬಳಸಿಕೊಳ್ಳಲಾಗುವುದು ಎಂದರು.

ಕೇರಳ ಹಾಗೂ ಉತ್ತರಾಖಂಡ ಭೂ ಕುಸಿತ ಘಟನೆ ಬಗ್ಗೆ ಪ್ರತಿಕ್ರಿಯಿಸಿ ಈ ಕುರಿತು ಕೇರಳ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ. ಅಗತ್ಯ ನೆರವು‌ ನೀಡುವುದಾಗಿಯೂ ತಿಳಿಸಿದ್ದೇನೆ. ಉತ್ತರಾಖಂಡದಲ್ಲಿ ಸಿಲುಕಿರುವ ಕರ್ನಾಟಕದವರ ರಕ್ಷಣೆಗಾಗಿ ಕ್ರಮ‌ಕೈಗೊಳ್ಳಲಾಗಿದೆ. ತುಷಾರ್ ಗಿರಿನಾಥ್ ಅವರನ್ನು ನೋಡಲ್ ಅಧಿಕಾರಿಯಾಗಿ‌ ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

Edited By : Shivu K
PublicNext

PublicNext

21/10/2021 10:59 am

Cinque Terre

32.85 K

Cinque Terre

6

ಸಂಬಂಧಿತ ಸುದ್ದಿ