ಪಣಜಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ 'ದುರ್ಗೆ' ಹಾಗೂ ಬಿಜೆಪಿ ಸರ್ಕಾರ 'ಭಸ್ಮಾಸುರ' ಇದ್ದಂತೆ ಎಂದು ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ನಾಯಕ ಕಿರಣ್ ಖಂಡೋಲ್ಕರ್ ಹೇಳಿದ್ದಾರೆ.
ಕರಾವಳಿ ರಾಜ್ಯದಿಂದ ಭಸ್ಮಾಸುರನ ನಿರ್ಮೂಲನೆ ಮಾಡುವುದು ಖಚಿತ. ಗೋವಾದಲ್ಲಿ ಬಿಜೆಪಿ ಸರ್ಕಾರ ನಿರ್ಮೂಲನೆ ಮಾಡಲು ಪಶ್ಚಿಮ ಬಂಗಾಳದಿಂದ ದುರ್ಗೆಯನ್ನು ಕರೆತರುವುದು ಅನಿವಾರ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ಟಿಎಂಸಿ ಜೊತೆಗೆ ಮೈತ್ರಿ ಹೊಂದುವ ಕುರಿತು ಮಾತುಕತೆ ನಡೆದಿದೆ ಎಂದು ಕಿರಣ್ ಖಂಡೋಲ್ಕರ್ ತಿಳಿಸಿದ್ದಾರೆ.
ಈ ಮಾತಿಗೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, "ನೀವು ಶಾಂತದುರ್ಗೆಯನ್ನು ಮನುಷ್ಯರ ಜೊತೆಗೆ ಅದು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಫಲಿತಾಂಶದ ನಂತರ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರಿಗೆ ಹೋಲಿಕೆ ಮಾಡಲಾಗದು. ಇಂಥ ಹೋಲಿಕೆಯನ್ನು ಗೋವಾದ ಜನರು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಫಲಿತಾಂಶದ ನಂತರ ಅವರು ಹೇಗೆ ನಡೆದುಕೊಂಡಿದ್ದಾರೆ ಎಂಬುದು ಗೊತ್ತಿದೆ" ಎಂದು ಹೇಳಿದ್ದಾರೆ.
PublicNext
17/10/2021 05:49 pm