ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

106 ವರ್ಷದ ಹಿರಿಯ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾದ ರಾಜನಾಥ್ ಸಿಂಗ್!

ನವದೆಹಲಿ: ದೇಶದ ಅತ್ಯಂತ ಹಿರಿಯ ಬಿಜೆಪಿ ಕಾರ್ಯಕರ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉತ್ತರ ಪ್ರದೇಶದ ಭುಲಾಯಿ ಭಾಯಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿದ್ದಾರೆ. ಯುಪಿ ಭವನದಲ್ಲಿ ಭುಲಾಯಿ ಭಾಯಿ ಅವರನ್ನು ಆತ್ಮೀಯವಾಗಿ ಭೇಟಿ ಮಾಡಿದ ರಾಜನಾಥ್ ಸಿಂಗ್, ಅವರನ್ನು ಸನ್ಮಾನಿಸಿದ್ದಾರೆ.

ಬಳಿಕ ಮಾತನಾಡಿದ ರಾಜನಾಥ್ ಸಿಂಗ್ ದೇಶದ ಅತ್ಯಂತ ಹಿರಿಯ ಬಿಜೆಪಿ ಕಾರ್ಯಕರ್ತ ಭುಲಾಯಿ ಭಾಯಿ ಅವರನ್ನು ಭೇಟಿ ಮಾಡಿರುವುದು ಅತೀವ ಸಂತಸ ತಂದಿದೆ. ಜನಸಂಘದ ಶಾಸಕರಾಗಿದ್ದ ಭೂಲಾಯಿ ಭಾಯಿ, 1977ರಲ್ಲಿ ನಾನು ಶಾಸಕನಾಗಿ ಆಯ್ಕೆಯಾದಾಗ ನಮಗೆ ಮಾರ್ಗದರ್ಶನ ಮಾಡಿದ ಹಿರಿಯರು ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ರಾಜನಾಥ್ ಸಿಂಗ್ ಭೇಟಿ ನಂತರ ಮಾತನಾಡಿದ ಭುಲಾಯಿ, ಕೃಷ್ಣ ಸುಧಾಮನನ್ನು ಭೇಟಿ ಮಾಡಿದಂತಾಯಿತು ಎಂದು ನುಡಿದರು.

Edited By : Nirmala Aralikatti
PublicNext

PublicNext

14/10/2021 10:09 pm

Cinque Terre

102.52 K

Cinque Terre

3