ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರುದ್ವಾರದಲ್ಲಿ ರೈತರ ಆತ್ಮಕ್ಕೆ ಶಾಂತಿ ಕೋರಿದ ಪ್ರಿಯಾಂಕಾ

ಲಿಖೀಂಪುರ: ಪ್ರಿಯಾಂಕಾ ಗಾಂಧಿ ಇವತ್ತು ಲಿಖೀಂಪುರ ತೆರಳಿದ್ದಾರೆ. ರೈತರ ಆತ್ಮಕ್ಕೆ ಶಾಂತಿ ಸಿಗಲಿ ಅಂತಲೇ ಇಲ್ಲಿಯ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈಗ ಇದೇ ಸುದ್ದಿ ಹೆಚ್ಚು ಗಮನ ಸೆಳೆಯುತ್ತಿದೆ.

ಪ್ರಿಯಾಂಕಾ ಗಾಂಧಿ ಪ್ರತಿ ನಡೆನೂ ಈಗ ಸುದ್ದಿ ಆಗುತ್ತಿವೆ. ಸುದ್ದಿಯಲ್ಲಿ ಇರಲೇಬೇಕು ಅಂತಲೋ. ಇಲ್ಲವೇ ನ್ಯಾಯಪರ ಹೋರಾಡಬೇಕು ಅಂತಲೋ. ಲಿಖೀಂಪುರ ರೈತರ ಘಟನೆಯನ್ನ ಬಿಡುತ್ತಲೇ ಇಲ್ಲ. ಈ ವಿಷಯವಾಗಿ ಸರ್ಕಾರದ ವಿರುದ್ಧ ಮಾತನಾಡುತ್ತಲೇ ಇದ್ದಾರೆ.

ಅದರಂತೆ ಇಂದು ಲಿಖೀಂಪುರ ರೈತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಿಯಾಂಕಾ ಗಾಂಧಿ ಇಲ್ಲಿಯ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಪ್ರಾರ್ಥನೆ ಸಲ್ಲಿಸಿರೋ ಆ ಕ್ಷಣದ ವೀಡಿಯೋ ಕೂಡ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿವೆ. ಜನರ ಗಮನ ಸೆಳೆಯು ಕೆಲಸವನ್ನೂ ಮಾಡುತ್ತಿದೆ.

Edited By :
PublicNext

PublicNext

12/10/2021 03:03 pm

Cinque Terre

45.64 K

Cinque Terre

0

ಸಂಬಂಧಿತ ಸುದ್ದಿ