ನವದೆಹಲಿ: ಅವಿದ್ಯಾವಂತರು ದೇಶಕ್ಕೆ ಹೊರೆ, ಅವರು ಭಾರತದ ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಗುಜರಾತ್ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು 20 ವರ್ಷಗಳ ಸಾರ್ವಜನಿಕ ಜೀವನ ಪೂರೈಸಿದ್ದಾರೆ. ಈ ಹಿನ್ನೆಲೆ ಸಂಸತ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, "ನೀವು ಇದನ್ನು ಮೌಲ್ಯಮಾಪನ ಮಾಡಿದಾಗ, ರಾಷ್ಟ್ರದ ಪ್ರಗತಿಗೆ ಅದರ ಕೊಡುಗೆ ಏನೆಂದು ನಿಮಗೆ ತಿಳಿಯುತ್ತದೆ. ಅನಕ್ಷರಸ್ಥ ವ್ಯಕ್ತಿಯು ದೇಶಕ್ಕೆ ಹೊರೆಯಾಗಿದ್ದಾನೆ. ಸಂವಿಧಾನ ನೀಡಿದ ಹಕ್ಕುಗಳ ಬಗ್ಗೆ ಅವನಿಗೆ ಅರಿವು ಇರುವುದಿಲ್ಲ. ಅಷ್ಟೇ ಅಲ್ಲದೆ ಆತನಿಗೆ ನಿರೀಕ್ಷಿತ ಕರ್ತವ್ಯಗಳ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಅಂತಹ ವ್ಯಕ್ತಿಯು ಹೇಗೆ ಉತ್ತಮ ನಾಗರಿಕನಾಗುತ್ತಾನೆ" ಎಂದು ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಶಿಕ್ಷಣವನ್ನು ಅರ್ಧದಲ್ಲಿಯೇ ಕೈಬಿಡುವ ಸಮಸ್ಯೆ ದೊಡ್ಡದಾಗಿತ್ತು. ಅವರು ದಾಖಲಾತಿ ಅಭಿಯಾನವನ್ನು ಹಬ್ಬದಂತೆ ಮಾಡಿ ಅದನ್ನು ಶೇ. 100 ರಷ್ಟು ಸಾಧಿಸಿದರು. ಇದರ ಫಲಿತಾಂಶವೆಂದರೆ ಅರ್ಧದಲ್ಲೇ ಶಾಲೆ ಬಿಡುವ ದರವು ಶೇ. 37ರಿಂದ 1ಕ್ಕೆ ಇಳಿದಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
PublicNext
11/10/2021 09:41 pm