ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಖಿಂಪುರ ಹಿಂಸಾಚಾರವನ್ನು ಹಿಂದೂ vs ಸಿಖ್ ಕದನವನ್ನಾಗಿಸುವ ಪ್ರಯತ್ನ: ವರುಣ್ ಕಳವಳ

ನವದೆಹಲಿ: 'ಲಖಿಂಪುರ ಖೇರಿ ಹಿಂಸಾಚಾರವನ್ನು ಹಿಂದೂ ವಿರುದ್ಧದ ಸಿಖ್‌ ಕದನವನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದು ಮುಂದಿನ ಪೀಳಿಗೆಗಳಿಗೆ ತಪ್ಪು ಸಂದೇಶ ರವಾನಿಸುತ್ತದೆ. ಸಣ್ಣ ರಾಜಕೀಯ ಲಾಭಕ್ಕಾಗಿ ರಾಷ್ಟ್ರೀಯ ಏಕತೆಗೆ ಭಂಗ ತರಬಾರದು' ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಅವರು, "ರೈತರ ಮೇಲಿನ ಹಿಂಸೆಯ ಬಗ್ಗೆ ತಪ್ಪು ಗ್ರಹಿಕೆಗಳನ್ನು ಸೃಷ್ಟಿಸುವುದು ಮುಂದಿನ ತಲೆಮಾರಿಗೂ ಅಪಾಯಕಾರಿಯಾಗಿದೆ. ಲಖಿಂಪುರ ಖೇರಿಯಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಬಡ ರೈತರ ಮೇಲೆ ಸ್ಥಳೀಯ ಆಡಳಿತವು ದೌರ್ಜನ್ಯ ನಡೆಸಿದ್ದು, ಕ್ರೂರ ಹತ್ಯಾಕಾಂಡ ನಡೆಸಿದೆ. ಇದಕ್ಕೆ ಧರ್ಮದ ನೆಲೆಗಟ್ಟಿನ ಯಾವುದೇ ಅರ್ಥವಿಲ್ಲ" ಎಂದು ಹೇಳಿದ್ದಾರೆ.

"ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಖಲಿಸ್ತಾನಿ ಎಂದು ಕರೆಯುವುದು ಸರಿಯಲ್ಲ. ಇದು ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ರೈತರಿಗೆ ಮಾಡಿದ ಅವಮಾನವಾಗಿದೆ. ರೈತರ ಹೋರಾಟವನ್ನು ತಪ್ಪಾಗಿ ಬಿಂಬಿಸುವುದು ರಾಷ್ಟ್ರದ ಏಕತೆಗೆ ಅಪಾಯಕಾರಿಯಾಗಿದೆ" ಎಂದು ಟ್ವೀಟ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

Edited By : Vijay Kumar
PublicNext

PublicNext

10/10/2021 05:07 pm

Cinque Terre

46.29 K

Cinque Terre

14

ಸಂಬಂಧಿತ ಸುದ್ದಿ