ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ಮುಖಂಡ ಪರಂಗೆ ತಿವಿದ ರೇಣುಕಾಚಾರ್ಯ

ಬೆಂಗಳೂರು: ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ರೇಣುಕಾಚಾರ್ಯ ಕೂಡ ಈಗ ರೊಚ್ಚಿಗೆದ್ದಿದ್ದಾರೆ. ಕಾಂಗ್ರೆಸ್ ನ ಮಾಜಿ ಡಿಸಿಎಂ ಜಿ.ಪರಮೇಶ್ವರ ಅವರ ಮಾತಿಗೆ ರಾಮಮಂದಿರ ಕಾಮಗಾರಿ ವಿಷಯ ನಮಗೆ ಬಿಡಿ.ನಿಮ್ಮ ಕಾಂಗ್ರೆಸ್ ಮುಕ್ತ ಭಾರತ ಕಾಮಗಾರಿ ಪೂರ್ಣಗೊಳಿಸಿ ಅಂತ ಟಾಂಗ್ ಕೊಟ್ಟಿದ್ದಾರೆ.

ಮೊನ್ನೆ ಜಿ.ಪರಮೇಶ್ವರ ಅವ್ರು ಕೇಂದ್ರದಲ್ಲಿ ಮುಂದೆ ಕಾಂಗ್ರೆಸ್ ಇರುತ್ತದೆ. ರಾಮಮಂದಿರವನ್ನ ಕಾಂಗ್ರೆಸ್ ಸರ್ಕಾರವೇ ಪುರ್ಣಗೊಳಿಸುತ್ತದೆ ಅಂತಲೇ ವಿಶ್ವಾಸದಿಂದಲೇ ನುಡಿದಿದ್ದರು. ಇದಕ್ಕೆ ತಿರುಗೇಟು ನೀಡಿರೋ ಶಾಸಕ ರೇಣುಕಾಚಾರ್ಯ, ಪರಮೇಶ್ವರ ಅವರೇ, ರಾಮಮಂದಿರದ ಕಾಮಗಾರಿ ವಿಷಯ ನಮಗೆ ಬಿಟ್ಟು ಬಿಡಿ. ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೀತಿರೋ ಕಾಂಗ್ರೆಸ್ ಮುಕ್ತ ಭಾರತವನ್ನ ಪೂರ್ಣಗೊಳಿಸಿ ಅಂತಲೇ ಚುಚ್ಚಿದ್ದಾರೆ ರೇಣುಕಾಚಾರ್ಯ.

Edited By :
PublicNext

PublicNext

08/10/2021 07:20 pm

Cinque Terre

34.72 K

Cinque Terre

4