ಹಾನಗಲ್: ಹಾನಗಲ್ ಹಾಗೂ ಸಿಂದಗಿ ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆಗೆ ವೇದಿಕೆ ಸಜ್ಜಾಗಿದೆ. ಎಲ್ಲ ನಾಯಕರು ತಮ್ಮ ತಮ್ಮ ಅಭ್ಯರ್ಥಿ ಪರ ತುರುಸಿನ ಪ್ರಚಾರ ನಡೆಸಿದ್ದಾರೆ.
ಪ್ರಚಾರ ಸಂದರ್ಭದಲ್ಲಿ ಕೆಲವರು ಗುಡಿ ಗುಂಡಾರ ಸುತ್ತಿದರೆ ಇನ್ನು ಕೆಲವರು, ಅದರಲ್ಲೂ ಕಾಂಗ್ರೆಸ್ ನಾಯಕರು ದರ್ಗಾ ಮಸೀದೆಗಳಿಗೆ ಭೇಟಿ ನೀಡುವುದು ಮಾಮೂಲು. ಕೈ ನಾಯಕರು ಮಠ ಮಂದಿರಗಳಿಗೆ ಭೇಟಿ ನೀಡಿದ್ದಾರೋ ಅಥವಾ ನೀಡುತ್ತಾರೋ ಗೊತ್ತಿಲ್ಲ. ಆದ್ರೆ ಈ ನಾಯಕರ ದರ್ಗಾ ಭೇಟಿ ಗ್ಯಾರಂಟಿ. ಅದರಂತೆ ಅವರು ಅಲ್ಲಿ ಪ್ರಾರ್ಥನೆ ಸಲ್ಲಿಸಿದ ವಿಡಿಯೋ ವೈರಲ್ ಆಗ್ತಾ ಇದೆ.
ಹಾನಗಲ್ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಪ್ರಚಾರಕ್ಕೆ ಬಂದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಚಿವ ಹೆಚ್.ಕೆ ಪಾಟೀಲ್ ಹಾಗೂ ಇನ್ನಿತರ ನಾಯಕರು ದರ್ಗಾಕ್ಕೆ ತೆರಳಿ ಅಲ್ಲಿಯ ಸಂಪ್ರದಾಯದಂತೆ ಧರ್ಮಗುರುಗಳೊಂದಿಗೆ ಪ್ರಾರ್ಥನೆ ಮಾಡಿದ್ದಾರೆ.
ವೈರಲ್ ಆಗುತ್ತಿರುವ ಈ ವಿಡಿಯೋ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಇದು ಸೌಹಾರ್ದ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಇದೆಲ್ಲ ರಾಜಕೀಯ ಗಿಮಿಕ್. ಮುಸ್ಲಿಂ ಮತಗಳನ್ನು ಸೆಳೆಯಲು ಓಲೈಕೆಗಾಗಿ ಕಾಂಗ್ರೆಸ್ ನಾಯಕರು ಈ ರೀತಿ ಮಾಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಒಂದು ವೇಳೆ ಜೆಡಿಎಸ್ ನ ಕುಮಾರಸ್ವಾಮಿ ಈ ವಿಡಿಯೋ ನೋಡಿದರೆ " ಸಿದ್ದರಾಮಯ್ಯ ಮುಸ್ಲಿಂ ಸಮುದಾಯಕ್ಕೆ ಟೋಪಿ ಹಾಕಲು ಈ ನಾಟಕವಾಡಿದ್ದಾರೆ '' ಲೇವಡಿ ಮಾಡಿದರೂ ಆಶ್ಚರ್ಯವಿಲ್ಲ. ನೋಡೋಣ ಓಲೈಕೆ ರಾಜಕಾರಣ ಎಲ್ಲಿಗೆ ತಲುಪುತ್ತೊ ಅಂತ.
PublicNext
08/10/2021 05:40 pm