ಬೆಂಗಳೂರೂ:ಕಳೆದ ಕೆಲವು ದಿನಗಳಿಂದ ಕಮಲ ಮತ್ತು ದಳದ ನಡುವೆ RSS ವಿಚಾರವಾಗಿ ಏಟು-ತಿರುಗೇಟಿನ ಆಟ ನಡೀತಾನೇ ಇದೆ. ಅಪ್ಪ RSS ಹೊಗಳುತ್ತಾರೆ. ಮಗ RSS ವಿರುದ್ಧ ಮಾತ್ ಅಡ್ತಾರೆ ಅಂತಲೇ ಬಿಜೆಪಿಯಲ್ಲಿ ಕಟುವಾದ ಮತ್ತು ತೀವ್ರವಾದ ಚರ್ಚೆ ನಡೆದಿದೆ. ಆದರೆ ಇಂದು ಮಾಜಿ ಪ್ರಧಾನಿ ದೇವೇಗೌಡರು ಬೆಂಗಳೂರಿನಲ್ಲಿ ನೀಡಿದ ಹೇಳಿಕೆ ಎಲ್ಲವನ್ನೂ ಉಲ್ಟಾಪಲ್ಟ ಮಾಡಿದೆ.
ದೇವೇಗೌಡರು ಇವತ್ತು ಬೆಂಗಳೂರಲ್ಲಿ ಈ ವಿಚಾರವಾಗಿಯೇ ಪ್ರೆಸ್ ಮೀಟ್ ಮಾಡಿದ್ದಾರೆ. RSS ಅನ್ನ ನಾನು ಯಾವತ್ತು ಹೊಗಳಲಿಲ್ಲ.ಎಂದೂ ಆ ಕೆಲಸ ಮಾಡಲಿಲ್ಲ. ಸುಳ್ಳು ಹೇಳೋಕೂ ಒಂದ್ ಇತಿಮಿತಿ ಇರಬೇಕು. ಹೊರತು ಮನಸ್ಸಿಗೆ ಬಂದಂತೆ ಮಾತಾಡೋದ ಸರಿ ಅಲ್ಲವೇ ಅಲ್ಲ.
ಅಡ್ವಾಣಿ ಬಂದಾಗ ನಾನು ಅವ್ರು ಸಮಾಲೋಚನೆ ಮಾಡಿದ್ದೇವು. ಎಮರ್ಜೆನ್ಸಿ ಟೈಮ್ ಅಲ್ಲಿ ಜೈಲಿಗೆ ಹೋದ ವಿಚಾರ ಮಾತನಾಡಿದ್ದೇವು. ಬ್ಯಾಂಕ್ವೆಟ್ ಹಾಲ್ ನಲ್ಲಿ ಒಂದು ಕಾರ್ಯಕ್ರಮ ಇತ್ತು. ಅದಕ್ಕೆ ನಾನೇ ಅನುಮತಿ ಕೊಟ್ಟಿದ್ದೆ.ಅದರ ಅಧ್ಯಕ್ಷತೆನೂ ವಹಿಸಿದ್ದೆ. ಸಭೆಯನ್ನ ದುರುಪಯೋಗ ಮಾಡೋದು ಸರಿಯ ಅಲ್ಲ ಅಂತಲೂ ಇದೇ ಸಭೆಯಲ್ಲಿ ಹೇಳಿದ್ದೆ ಅಷ್ಟೆ. ಕುಮಾರ್ ಸ್ವಾಮಿ ಹೇಳಿದ ಮಾತಿಗೆ ಜೋಡಿಸಿ ನಾನು ಆರ್ ಎಸ್.ಎಸ್. ಹೊಗಳಿದೆ ಅಂತ ಹೇಳೋದು ಎಷ್ಟು ಸರಿ ಅಂತ ಪ್ರಶ್ನೆ ಮಾಡಿದ್ದಾರೆ ದೇವೇಗೌಡರು.
PublicNext
08/10/2021 05:01 pm