ಬೆಂಗಳೂರು:ಲಖೀಂಪುರ ರೈತರ ಸಾವಿನ ಘಟನೆ ಕಾಂಗ್ರೆಸ್ ಗೆ ಬಿಜೆಪಿಯನ್ನ ಟೀಕಿಸಲು ಒಂದ್ ಅಸ್ತ್ರವೇ ಆಗಿದೆ. ಡಿ.ಕೆ.ಶಿವಕುಮಾರ್ ಮಾಡಿದ್ದ ಟ್ವೀಟ್ ಗೆ,ಕರ್ನಾಟಕ ಬಿಜೆಪಿಯ ಅಧಿಕೃತ ಪೇಜ್ ಅಲ್ಲಿ ಡಿಕೆಶಿ ಹೊಡೆದಿರೋ ಆ ಒಂದ್ ವೀಡಿಯೋ ಸಮೇತ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದೆ.
ಡಿ.ಕೆ.ಶಿವಕುಮಾರ್ ಇವತ್ತು ತಮ್ಮ ಅಧಿಕೃತ ಪೇಜ್ ಅಲ್ಲಿ ಒಂದ್ ವೀಡಿಯೋ ಮಾಡಿ ಕಾಮೆಂಟ್ ಮಾಡಿದ್ದಾರೆ. ಇದು ನೇರವಾಗಿ ಬಿಜೆಪಿಯನ್ನ ಕೆರಳಿಸುವಂತಿದೆ. ಸಾರ್ವಜನಿಕರಲ್ಲಿ ಮನವಿ. ಬಿಜೆಪಿ ನಾಯಕರ ಕಾರು ನಿಮ್ಮ ಪಕ್ಕ ಹೋಗುವಾಗ ನೀವೂ ನಿಮ್ಮ ಮೋಬೈಲ್ ಅನ್ನ ಆನ್ ಇಟ್ಟುಕೊಳ್ಳಿ. ಅದನ್ನ ಚಿತ್ರೀಕರಿಸಿಯೂ ಬಿಡಿ. ಗೊತ್ತಿಲ್ಲ. ಇದು ಮುಂದೊಂದಿನ ಅತಿ ದೊಡ್ಡ ಸಾಕ್ಷಿನೂ ಆಗಬಹುದು ಅಂತ ಬಲವಾಗಿಯೇ ಟೀಕಿಸಿದ್ದಾರೆ.
ಇಷ್ಟೆಲ್ಲ ಹೇಳಿದ್ಮೇಲೆ ಬಿಜೆಪಿಯವ್ರು ಸುಮ್ಮನೆ ಕೂಡ್ತಾರಾ ? ನೋ ವೇ ಚಾನ್ಸೇ ಇಲ್ಲ. ಬಿಜೆಪಿಯ ಅಧಿಕೃತ ಟ್ವಿಟರ್ ಪೇಜ್ ಅಲ್ಲಿ ತಕ್ಷಣವೇ ಒಂದ್ ವೀಡಿಯೋ ಅಪ್ ಲೋಡ್ ಆಗಿದೆ.ಇದರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಪಕ್ಕ ಬರ್ತಾರೆ. ಆಗ ಡಿಕೆಶಿ ಆ ಕಾರ್ಯಕರ್ತನನ್ನ ಹೊಡೆದು ಕಳಿಸುತ್ತಾರೆ. ಈ ವೀಡಿಯೋ ಇಟ್ಟುಕೊಂಡೇ, ನಿಮ್ಮ ಪಕ್ಕ ಬಂದ್ರೆ ಹೆಲ್ಮೆಟ್ ಧರಿಸಬೇಕಾ ಅಂತ ಕೇಳಿ ತಿರುಗೇಟು ನೀಡಿದೆ ಕೇಸರಿ ಪಡೆ.
PublicNext
08/10/2021 11:47 am